ಚಿಕ್ಕಮಗಳೂರು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸುತ್ತೇವೆ. ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರಿಂದ ಹೇಳಿಸುವ ಮೂಲಕ ಕಾಂಗ್ರೆಸ್ ‘ ಪಕ್ಷ ರಾಜ್ಯದ ಜನರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು. ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಚುನಾವಣೆ ಗೆಲ್ಲಲಾಗುವುದಿಲ್ಲ. ಎನ್ನುವ ಭಯ ಈಗಲೇ ಕಾಡಲಾರಂಭಿಸಿದೆ ಎನ್ನುವುದು ಇದರ ಸೂಚನೆಯಾಗಿದೆ.
ಚುನಾವಣೆಗೆ ಮುನ್ನವೇ ಸೋಲಪ್ಪಿರುವ ಕಾಂಗ್ರೆಸ್ ಗೆ ಆತ್ಮವಿಶ್ವಾಸ ಕುಗ್ಗಿಹೋಗಿದೆ ಎಂದರು. ನಮ್ಮ ಕೇಸರಿ ಪಡೆಯ ರಥೋತ್ಸಾಹದಲ್ಲಿ ಬಿಜೆಪಿ ಚುನಾವಣೆಯನ್ನು ಎದುರು ನೋಡುತ್ತಿದೆ. ರಾಮನ ಜಯಘೋಷ ಕೇಳಿ ಕಾಂಗ್ರೆಸ್ ಪಕ್ಷ ಗಾಬರಿಗೊಂಡಿದೆ. ಕೇಸರಿ ಕಂಡ ಕೂಡಲೇ ವಿಚಲಿತರಾಗುತ್ತಿದ್ದಾರೆ. ಈಗ ಕಾಂಗ್ರೆಸ್ ಗ್ಯಾರಂಟಿಗಿಂತಲೂ ಮೋದಿ ಗ್ಯಾರಂಟಿ, ಬಿಜೆಪಿ ಪರವಾದ ವಾತಾವರಣ ರಾಜ್ಯದಲ್ಲಿದೆ. ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಫಲಿತಾಂಶ ಬರಲಿದೆ ಚುನಾವಣೆ ನಂತರ ಕಾಂಗ್ರೆಸ್ ಅಡ್ರೆಸ್ ಇರುವುದಿಲ್ಲ ಚುನಾವಣೆಯನ್ನು ಕಾರ್ಯಕರ್ತರೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು