ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ನಿವಾಸಿ ಕೃತಿಕ್ ಎಂಬ 10ವರ್ಷದ ಬಾಲಕ ಮೂಳೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬಾಲಕನ ಚಿಕಿತ್ಸೆಗೆ ಸುಮಾರು 25ಲಕ್ಷ ರೂ ಅಂದಾಜಿಸಲಾಗಿದ್ದು ಮಗುವಿನ ಪೆÇೀಷಕರು ನೆರವಿಗಾಗಿ ವಿವಿಧ ಸಂಘಸಂಸ್ಥೆಗಳು ಹಾಗೂ ದಾನಿಗಳ ಮೊರೆ ಇಟ್ಟಿದ್ದಾರೆ. ಈ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಟದ ಬಾರಿಕೆರೆ ಯುವಕ ಮಂಡಲ ಸುಮಾರು 75ಸಾವಿರ ರೂ ಒಗ್ಗೂಡಿಸಿದ್ದು ಅದನ್ನು ಭಾನುವಾರ ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಕಾಂಚನ್ ಮಗುವಿನ ಪೆÇೀಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್,ಗೌರವ ಸಲಹಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕಾಂಚನ್ ,ಸಂಘದ ಪ್ರಮುಖರಾದ ಪವನ್ ಕುಂದರ್,ರಂಜಿತ್ ಕುಮಾರ್,ಪ್ರತಾಪ್ ಪೂಜಾರಿ ಮತ್ತಿತರರು ಇದ್ದರು.ಇಲ್ಲಿನ ಕೋಟದ ಬಾರಿಕೆರೆ ಯುವಕ ಮಂಡಲ ಸುಮಾರು 75ಸಾವಿರ ರೂ ಒಗ್ಗೂಡಿಸಿದ್ದು ಅದನ್ನು ಭಾನುವಾರ ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಕಾಂಚನ್ ಮಗುವಿನ ಪೆÇೀಷಕರಿಗೆ ಹಸ್ತಾಂತರಿಸಿದರು. ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್,ಗೌರವ ಸಲಹಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕಾಂಚನ್ ಮತ್ತಿತರರು ಇದ್ದರು.