Home » ಬಸ್ರೂರು : ನಾಳೆ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಉದ್ಘಾಟನೆ
 

ಬಸ್ರೂರು : ನಾಳೆ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಉದ್ಘಾಟನೆ

by Kundapur Xpress
Spread the love

ಕುಂದಾಪುರ: ಮಾರ್ಗೋಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಹಾಗೂ ಎಂ.ಎನ್. ಶೆಟ್ಟಿ ಹಾಲ್‌ನ ಉದ್ಘಾಟನಾ ಸಮಾರಂಭ ಮೇ 2 ರಂದು ನಡೆಯಲಿದೆ.

ಬಸ್ರೂರಿನ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರು ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್‌ ಅನ್ನು ಉದ್ಘಾಟಿಸಿ, ಶುಭಹಾರೈಸಲಿದ್ದಾರೆ. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಶಾಸಕರಾದ ಕಿರಣ್ ಕುಮಾ‌ರ್ ಕೊಡ್ಡಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಬು ಹೆಗ್ಡೆ ಬಸ್ರೂರು ಗ್ರಾ.ಪಂ. ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿ ಪಿಡಿಒ ಚಂದ್ರ ಬಿಲ್ಲವ, ಸಿವಿಲ್ ಎಂಜಿನಿಯರ್ ಬಿ. ಗಣೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಮೇ 1 ರಂದು ಸಂಜೆ 7 ಗಂಟೆಗೆ ಗುರುಗಣಪತಿ ಪೂಜಾ, ಮಹಾ ಸಂಕಲ್ಪ ಸಪ್ತ ಶುದ್ದಿ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ಸುದರ್ಶನ ಮಂಡಲ ಪೂಜೆ, ಸುದ ರ್ಶನ ಹೋಮ, ದಿಗಲಿ, ರಕ್ಷಾ ಬಂಧನ ನಡೆಯಲಿದೆ. ಮೇ 2 ರ ಬೆಳಗ್ಗೆ ಲಕ್ಷ್ಮೀ ನರಸಿಂಹ ಹೋಮ, ಗಣಹೋಮ, ಸತ್ಯನಾರಾಯಣ ಪೂಜಾ, ದ್ವಾರ ಲಕ್ಷ್ಮೀ ಪೂಜಾ, ವಾಣಿಜ್ಯ ಸಂಕೀರ್ಣ ಪ್ರವೇಶ ಹಾಗೂ ಭೋಜನ ಕೂಟ ನಡೆಯಲಿದೆ ಎಂದು ಮಾಲಕರಾದ ನಾಗರಾಜ ಶೆಟ್ಟಿ ಕೈಲಾಡಿ ಮೇಲ್ಮನೆ ಚಿತ್ತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಏನೆಲ್ಲ ವಿಶೇಷತೆಗಳು?

ಶ್ರೀ ಬ್ರಹ್ಮಲಿಂಗೇಶ್ವರ ವಾಣಿಜ್ಯ ಸಂಕೀರ್ಣದಲ್ಲಿಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಅನುಕೂಲವಾಗುವಂತಹ ಸಂಪೂರ್ಣ ಹವಾ ನಿಯಂತ್ರಿತ 600 ಆಸನಗಳ ವ್ಯವಸ್ಥೆಯುಳ್ಳಎಂ.ಎನ್.ಶೆಟ್ಟಿಹಾಲ್ ಇದೆ. ಲಿಫ್ಟ್‌ನ ಸೌಲಭ್ಯ, ಹಾಲ್‌ನಲ್ಲಿ ಕ್ಯಾಟರಿಂಗ್ ಸೌಲಭ್ಯವಿದೆ. ತಮ್ಮದೇ ಕ್ಯಾಟರಿಂಗ್ ವ್ಯವಸ್ಥೆಯು ಇದೆ. ಸಂಪೂರ್ಣ ಸಿಸಿಟಿವಿ ಕಣ್ಣಾವಲಿದೆ. ವಾಹನಗಳ ನಿಲುಗಡೆಗೆ ವಿಶಾಲ ವ್ಯವಸ್ಥೆಯಿದೆ.

 

Related Articles

error: Content is protected !!