ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಜೀವನ ಮೌಲ್ಯ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟನೆ

by Kundapur Xpress
Spread the love

ಕುಂದಾಪುರ : ವಿದ್ಯಾರ್ಥಿ ದೆಸೆಯಲ್ಲಿ ದೇಹ, ಬುದ್ದಿ, ಭಾವನೆ, ಆತ್ಮಕ್ಕೆ ಶಿಕ್ಷಣ ಸಿಗಬೇಕು. ಆ ಶಿಕ್ಷಣ ವೇದ ವಿಜ್ಞಾನ, ಕೃಷಿ, ಕಲಾಕೌಶಲ, ಯೋಗ ಎನ್ನುವುದನ್ನು ಕಲಿಸಬೇಕು ಮತ್ತು ಮೌಲ್ಯಗಳು ಪರಂಪರಾಗತವಾಗಿ ಹಸ್ತಾಂತರವಾಗುವುದರೊAದಿಗೆ ಮೌಲ್ಯವರ್ಧನೆಗೊಳ್ಳುವ ಮೂಲಕ ಜನಮಾನಸದಲ್ಲಿ ಉಳಿಯುವಂತಾಗಬೇಕಾದರೆ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಪಠ್ಯಪೂರಕ ಕಾರ್ಯಗಳಾಗಬೇಕು ಎಂದು ನಂದಗೋಕುಲ ಶಿಶುಮಂದಿರದ ವ್ಯವಸ್ಥಾಪಕರಾದ ಕಟ್ಕೇರಿ ಶ್ರೀ ಪ್ರೇಮಾನಂದ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಸರಣಿ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಾಹುಲ್ ಅಮೀನ್ ಸ್ವಾಗತಿಸಿ, ನಾಗೇಂದ್ರ ವಂದಿಸಿ, ಅನನ್ಯ ಅಡಿಗ ನಿರೂಪಿಸಿದರು.

 

Related Articles

error: Content is protected !!