Home » ಡಿ. ದೇವರಾಜ್ ಅರಸುರವರ 109ನೇ ಜನ್ಮದಿನಾಚರಣೆ
 

ಡಿ. ದೇವರಾಜ್ ಅರಸುರವರ 109ನೇ ಜನ್ಮದಿನಾಚರಣೆ

by Kundapur Xpress
Spread the love

ಕುಂದಾಪುರ :  ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ತಾಲೂಕ್ ಆಡಳಿತ, ತಾಲೂಕ್ ಪಂಚಾಯತ್, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕೊಡ್ಗಿಯವರು ಹಿಂದುಳಿದ ವರ್ಗಗಳ ಧೀಮಂತ ನಾಯಕ ಪರಿವರ್ತನೆ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿ.ಡಿ. ದೇವರಾಜ್ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದರು

ಈ ರಾಷ್ಟ್ರ ಕಂಡ ಮಹಾನ್ ಮುತ್ಸದ್ದಿ, ರಾಜಕಾರಣಿಗಳಲ್ಲಿ ಡಿ ದೇವರಾಜ್ ಅರಸ್ ಅವರು ಅಗ್ರಗಣ್ಯರು, 1969 ರಿಂದ 79ರ ದಶಕದಲ್ಲಿ ಅರಸು ಯುಗ ಎಂದು ಹೇಳುವುದು ವಾಡಿಕೆಯಾಗಿದೆ.ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ ನಿವೇಶನ ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣದ ಯೋಜನೆ,, ಭಾಗ್ಯ ಜ್ಯೋತಿಯ ಯೋಜನೆ ಮೂಲಕ ದುರ್ಬಲರ ಮನೆಗೆ ದೀಪ ಬೆಳಗಿಸಿದವರು. ಎಂದು ನುಡಿದರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ ಅವರು ಡಿ ದೇವರಾಜ್ ಅರಸು ಅವರ ಮಹತ್ವವನ್ನ ತಿಳಿಸಿದರು.ಈ ಸಂದರ್ಭದಲ್ಲಿ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.ಪ್ರಶಾಂತ್ ನೀಲಾವರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಸದ್ರಿ ಕಾರ್ಯಕ್ರಮದ ವೇದಿಕೆಯಲ್ಲಿಕೆ. ಮಹೇಶ್ ಚಂದ್ರ ಸಹಾಯಕ ಆಯುಕ್ತರು ಕುಂದಾಪುರ ಉಪವಿಭಾಗ,,ಶ್ರೀಮತಿ ಶೋಭಾ ಲಕ್ಷ್ಮಿ ಎಚ್ ತಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ಕುಂದಾಪುರ, ಶಶಿಧರ ಕೆ.ಜಿ. ಕಾರ್ಯನಿರ್ವನಾಧಿಕಾರಿ ತಾಲೂಕ್ ಪಂಚಾಯತ್,,ಆನಂದ.ಜೆ. ಮುಖ್ಯ ಅಧಿಕಾರಿ ಕುಂದಾಪುರ ಪುರಸಭೆ, ಶ್ರೀಮತಿ ಶಶಿಕಲಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕುಂದಾಪುರ, ಉಪಸಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಾತಿ ನಿರ್ವಹಿಸಿದರು.

   

Related Articles

error: Content is protected !!