Home » ‘ನೆನೆದವರ ಮನೆಯಲ್ಲಿ ಭಜನೆ’
 

‘ನೆನೆದವರ ಮನೆಯಲ್ಲಿ ಭಜನೆ’

by Kundapur Xpress
Spread the love

ಉಡುಪಿ : ಶ್ರೀ ರಾಮ ಭಜನಾ ಮಂಡಳಿ ಭಜನೆಕಟ್ಟೆ, ಕೊಂಡಾಡಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ನೆನೆದವರ ಮನೆಯಲ್ಲಿ ಭಜನೆಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೇಮಾರು ಮಠಾಧೀಶರಾದ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು 2023 ರ ಎಪ್ರಿಲ್‌ 2ರಂದು ಚಾಲನೆ ನೀಡಿದ ನೆನೆದವರ ಮನೆಯಲ್ಲಿ ಭಜನೆಕಾರ್ಯಕ್ರಮವು ಮನೆಮಾತಾಗಿದ್ದು ಮನೆ ಮನೆಗಳಲ್ಲಿ ಭಕ್ತಿ-ಭಾವದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ನವ ವಿಧ ಭಕ್ತಿಗಳಲ್ಲಿ ಭಜನೆಗೆ ಅತ್ಯಂತ ಹೆಚ್ಚಿನ ಮಹತ್ವವಿದ್ದು, ದೇವರನ್ನು ಒಲಿಸಿ ಕೊಳ್ಳುವ ಏಕೈಕ ಸುಲಭ ಮಾರ್ಗ ಭಜನೆ ಇಂದು ಎಲ್ಲೆಡೆಯೂ ನಡೆಯುತ್ತಿದೆ.ಇಂತಹ ನೆಮ್ಮದಿ, ಏಕಾಗ್ರತೆಯ ಜೊತೆಗೆ ದೇವರನ್ನು ಸಂತ್ರಪ್ತಿಪಡಿಸುವ ಭಜನೆಯನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸುವ ಸದುದ್ದೇಶದಿಂದ ನೆನೆದವರ ಮನೆಯಲ್ಲಿ ಭಜನೆಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮದುವೆಯ ಮೆಹಂದಿ, ಹುಟ್ಟು ಹಬ್ಬ, ವೈವಾಹಿಕ ವರ್ಧoತಿ ಆಚರಣೆ ಮುಂತಾದ ಶುಭ ಸಮಾರಂಭಗಳಲ್ಲಿ ಅವರವರ ಇಚ್ಛಾನುಸಾರ ಮನೆ ಮನೆಗಳಲ್ಲಿ ನಡೆಯುತ್ತಿರುವ ವಿಶೇಷ ಭಜನಾ ಸೇವೆಯು ಜ.28ರಂದು ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ 60ನೆೇ ದಿನವನ್ನು ಪೂರೈಸಿದೆ.

ಭಜನಾ ಸೇವೆ ನಡೆಸುವ ಪ್ರತೀ ಮನೆಯವರಿಗೆ ದಾಸವರೇಣ್ಯ ಪುರಂದರ ದಾಸರ ಕೃತಿಯ ಭಜನಾ ಪುಸ್ತಕವನ್ನು ನೀಡಿ ಶ್ರೀ ರಾಮ ಭಜನಾ ಮಂಡಳಿಯ ಜೊತೆಗೆ ಭಜನಾ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಜೊತೆಗೆ ದೀರ್ಘಾಯುಷ್ಯ, ಆರೋಗ್ಯ ಭಾಗ್ಯ, ಸಕಲ ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿದೆ.

ಎ.14ರಿಂದ ಎ.18ರ ವರೆಗೆ ಶ್ರೀ ರಾಮ ನವಮಿಯ ಸುಸಂದರ್ಭದಲ್ಲಿ ನಡೆಯಲಿರುವ ಅಖಂಡ ಭಜನಾ ಮಂಗಲೋತ್ಸವಮತ್ತು ಸುವರ್ಣ ಮಹೋತ್ಸವದಲ್ಲಿ ಸಮಸ್ತ ಭಗವಧ್ಭಕ್ತರು ಹಾಗೂ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ರಾಮ ಭಜನಾ ಮಂಡಳಿ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ

   

Related Articles

error: Content is protected !!