ಉಡುಪಿ : ಭಾರತ್ ವಿಕಾಸ ಪರಿಷದ್ ,ಭಾರ್ಗವ, ಶಾಖೆ, ಉಡುಪಿ, ಇವರ ವತಿಯಿಂದ “ಭಾರತ್ ಕೋ ಜಾನೋ”, “ಭಾರತವನ್ನು ತಿಳಿಯಿರಿ”, ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ 26. 8.2023 ರಂದು TA PAI ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಆಯೋಜಿಸಿದ್ದರು. ಕಿರಿಯ, ಹಿರಿಯ ಮಕ್ಕಳ ವಿಭಾಗ ಸೇರಿ ಸುಮಾರು 40 ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀಹರಿ ಮತ್ತು ತಂಡದವರು, ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು, ಅತ್ಯುತ್ತಮವಾಗಿ ನಡೆಸಿಕೊಟ್ಟರು.
ಕಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೊದಲ ಬಹುಮಾನ , TA Pai ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಬಹುಮಾನ ಮತ್ತು ಇಂದ್ರಾಳಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಬಹುಮಾನ ಗಳಿಸಿದವು.
ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಮೊದಲ ಬಹುಮಾನ, St. ಸಿಸಿಲಿಸ್ ಪ್ರೌಢಶಾಲೆ ದ್ವಿತೀಯ ಬಹುಮಾನ ಮತ್ತು ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೃತೀಯ ಬಹುಮಾನ ಗಳಿಸಿದವು.
ಶ್ರೀ ಹೆಚ್ ಹರಿರಾಮ ಶೆಣೈ ಭಾರತ್ ವಿಕಾಸ್ ಪರಿಷದ್ ನ ದಕ್ಷಿಣಪ್ರಾಂತ ಕೋಶಾಧಿಕಾರಿಗಳು,ಕಾರ್ಯಕ್ರಮದ ಮೂಲ ಉದ್ದೇಶವನ್ನು ವಿವರಿಸುತ್ತಾ ನಮ್ಮ ದೇಶದ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಹೆಮ್ಮೆ,ಸಮರ್ಪಣಾ ಭಾವನೆ ಉದ್ದೀಪನ ಗೊಳಿಸುವುದೇ ಆಗಿದೆ ಹಾಗೂ ದೇಶದ ಎಲ್ಲ ಮಜಲುಗಳ ಮಾಹಿತಿ ಪಡೆದ ಮಕ್ಕಳು ದೇಶದ ಬಗ್ಗೆ ಹೆಮ್ಮೆ ಪಡುವಂತಾಗಬೇಕೆಂದು ಕರೆ ನೀಡಿದರು.
ಶ್ರೀಯುತ ಅಶೋಕ ಕಾಮತ್ ಬ್ಲಾಕ್ ಶಿಕ್ಷಣಾಧಿಕಾರಿ ಉಡುಪಿ, ಕುಮಾರಿ ರಶ್ಮಿ ಸಾಮಂತ್ Oxford University ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರು,ಸಾಮಾಜಿಕ ಕಾರ್ಯಕರ್ತರು, ಶ್ರೀಮತಿ ವಿನೋದ ಶೆಟ್ಟಿ,ಮುಖ್ಯೋಪಾಧ್ಯಾಯಿನಿ, TAPAI ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇವರುಗಳು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು ಮತ್ತು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಭಾರತ್ ವಿಕಾಸ್ ಪರಿಷದ್ ನ ಸಂಚಾಲಕರು ಶ್ರೀ ಪ. ವಸಂತ ಭಟ್ ಹಾಗೂ ಸದಸ್ಯರು ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ ವಿಕಾಸ್ ಪರಿಷದ್ ಅಧ್ಯಕ್ಷ ಸಿ ಪಿ ಕೃಷ್ಣದಾಸ್ ಅವರು ಅತಿಥಿಗಳಿಗೆ ಸ್ವಾಗತ ಬಯಸಿದರು. ಎಸ್ ಸುಬ್ರಾಯ ಶೆಣೈ ಕಾರ್ಯದರ್ಶಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗುರುನಾಥ ರಾವ್ ವಂದನಾರ್ಪಣೆ ಸಲ್ಲಿಸಿದರು