ಕೋಟ : ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಿದ್ವಾನ್ ಶ್ರೀಧರ್ ರಾವ್ ಬನ್ನಂಜೆ ಅವರ ಮಾರ್ಗದರ್ಶನದಲ್ಲಿ ಕುಮಾರಿ ಅಂಜನಾದೇವಿ ಜಿ.ಎಸ್.ಉತ್ತಮ ಅಂಕಗಳೊAದಿಗೆ ತೇರ್ಗಡೆಯಾಗಿದ್ದಾರೆ . ಇವರು ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಮತ್ತು ಶ್ರೀಮತಿ ಗುಲಾಬಿಯವರ ಸುಪುತ್ರಿಯಾಗಿದ್ದು, ಬಿ.ಎಸ್ಸಿ ಪದವೀಧರರಾಗಿದ್ದಾರೆ ಪ್ರಸ್ತುತ ಬಿ.ಎಡ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ