ಭಟ್ಕಳ : ರಾಜ್ಯಾದ್ಯಂತ ನವೆಂಬರ್ 01 ರಂದು ರಾಜ್ಯೋತ್ಸವ ಸಂಭ್ರಮದಿಂದ ಜರುಗಿತು. ಆದರೆ, ಓರ್ವ ಮಹಿಳಾ ಕರ್ನಾಟಕ ಜನಪ್ರತಿನಿಧಿಯೇ ಕನ್ನಡದ ಭುವನೇಶ್ವರಿ ದೇವಿಗೆ ನಮನ ಸಲ್ಲಿಸಲು ವಿದಾಕರಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೋಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಖಾಜೀಯಾ ಆಪ್ಸಾ ಕನ್ನಡಾಂಭೆ ಭಾವ ಚಿತ್ರಕ್ಕೆ ನಮನ ಸಲ್ಲಿಸಲು ಹಿಂದೇಟು ಹಾಕಿದರು
ಭಟ್ಕಳ ಉಪ ವಿಭಾಗಾಧಿಕಾರಿ ಡಾ.ನಯನಾ ಧ್ವಜಾರೋಹಣ ನೆರವೇರಿಸಿದ ಬಳಿಕ ಸಮಾರಂಭದಲ್ಲಿದ್ದ ಎಲ್ಲ ಗಣ್ಯನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅವರು ಪುಷ್ಪನಮನ ಸಲ್ಲಿಸಲು ಖಾಜಿಯಾ ಅವರಿಗೆ ತಿಳಿಸಿದರು. ಆದರೆ, ಕನ್ನಡಾಂಬೆಗೆ ನಮನ ಸಲ್ಲಿಸಲು ಖಾಜಿಯಾ ನಿರಾಕರಿಸಿದರು.
ಡಾ.ನಯನಾ ಅವರು ಪುನಃ ಆಹ್ವಾನಿಸಿದ್ದರೂ ನಿರಾಕರಿಸಿ ದೂರ ಉಳಿದರು, ಅಧ್ಯಕ್ಷೆಯ ಈ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜನರಿಂದ ಆಯ್ಕೆಯಾದವರೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.