Home » ಹತಾಶೆಯ ಮನೋಭಾವದಿಂದ ಬೇಜವಾಬ್ದಾರಿ ಹೇಳಿಕೆ
 

ಹತಾಶೆಯ ಮನೋಭಾವದಿಂದ ಬೇಜವಾಬ್ದಾರಿ ಹೇಳಿಕೆ

ವಿ. ಸುನಿಲ್‌ ಕುಮಾರ್

by Kundapur Xpress
Spread the love

ಬೆಂಗಳೂರು: ದೇಶ ವಿಭಜನೆ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್‌ರಿಗೆ ಬುದ್ದಿವಾದ ಹೇಳಬೇಕೇ ಹೊರತು ಅವರನ್ನು ಸಮರ್ಥಿಸುವುದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌ ನುಡಿದರು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಯಿತು ಎಂದು ದೇಶ ವಿಭಜನೆಯ ಮಾತನಾಡಿದ್ದಾರೆ. ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ ಸಮರ್ಪಕ ಮಾಹಿತಿ ಇಲ್ಲದೆ, ದಕ್ಷಿಣ ಭಾರತ ವಿಭಜನೆ ಆಗಬೇಕು ಎನ್ನುವ ಕಲ್ಪನೆಯೇ ಸರಿಯಲ್ಲ ಇವರದು ಹತಾಶೆಯ ಹೇಳಿಕೆ ಈ ಹೇಳಿಕೆಗೆ ಜನಾಕ್ರೋಶ ಶುರುವಾಗಿದೆ. ಯಾವುದೇ ಕಾರಣಕ್ಕೂ ದೇಶ ವಿಭಜನೆ ಆಗಬಾರದು ಎಂದ ಅವರು ಹತಾಶೆಯ ಮನೋಭಾವದಿಂದ ಬೇಜವಾಬ್ದಾರಿ ಹೇಳಿಕೆ ಕೊಡಬಾರದು ಎಂದರು

   

Related Articles

error: Content is protected !!