Home » ಬಿಜೆಪಿ ಪೂರ್ವಭಾವಿ ಸಭೆ
 

ಬಿಜೆಪಿ ಪೂರ್ವಭಾವಿ ಸಭೆ

by Kundapur Xpress
Spread the love

ಕುಂದಾಪುರ : ಪುರಸಭೆ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಮಾವೇಶವನ್ನು ಏಪ್ರಿಲ್ 23ರ ಆದಿತ್ಯವಾರದಂದು ವ್ಯಾಸರಾಜ ಮಠದ ಹಾಲಿನಲ್ಲಿ ನಡೆಯಲಿದ್ದು ವಾರ್ಡ್ ಪ್ರಮುಖರ ಪೂರ್ವಭಾವಿ ಸಭೆಯು ಇಂದು ಭಾರತೀಯ ಜನತಾ ಪಾರ್ಟಿಯ ನಗರದ ಕಚೇರಿಯಲ್ಲಿ ನಡೆಯಿತು ವೇದಿಕೆಯಲ್ಲಿ ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ ಅಂಕದ ಕಟ್ಟೆ ಪುರಸಭಾ ಅಧ್ಯಕ್ಷ ವೀಣಾ ಭಾಸ್ಕರ್ ಮೆಂಡನ್ ಮಂಗಳೂರು ಪ್ರಭಾರಿ ರಾಜೇಶ್ ಕಾವೇರಿ ಕಾಡೂರು ಸುರೇಶ್ ಶೆಟ್ಟಿ ಮೋಹನ್ ದಾಸ ವಿಜಯ ಪೂಜಾರಿ  ಸದಾನಂದ ಕಾಂಚನ್ ಬಳ್ಕೂರು ಶಿವ ಮೆಂಡನ್ ಕಡ್ಗಿ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು
ಕುಂದಾಪುರ ಮಂಡಲ ಅಧ್ಯಕ್ಷರಾದ ಅಂಕಲ್ ಕಟ್ಟೆ ಶಂಕರ್ ಅವರು ಮಾತನಾಡಿ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಕಿರಣ್ ಕೊಡುಗೆಯವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ವಿನಂತಿಸಿದರುಮಂಗಳೂರು ಪ್ರಭಾರಿ ರಾಜೇಶ್‌ ಕಾವೇರಿ ಮಾತನಾಡಿ 90ರ ದಶಕದಲ್ಲಿ ಕುಂದಾಪುರ ಪುರಸಭೆಯಲ್ಲಿ ಕೇವಲ ಎರಡೇ ಸದಸ್ಯರಿದ್ದು ನಂತರದ ದಿನಗಳಲ್ಲಿ ಸದಸ್ಯರ ಸಂಖೈಯನ್ನು ಹೆಚ್ಚಿಸಿಕೊಂಡು ಕಳೆದ ಮೂರು ಅವಧಿಗಳಲ್ಲಿ ಕುಂದಾಪುರ ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮುನ್ನೆಡೆಸುತ್ತಿದ್ದು ಇದರ ಹಿಂದೆ ಕಿರಣ್‌ ಕೊಡ್ಗಿಯವರ ಅಪಾರ ಶ್ರಮವಿದೆ ಎಂದರು

 

Related Articles

error: Content is protected !!