Home »  ಗ್ಯಾರಂಟಿ ಕಳೆದುಕೊಂಡ ಕಾಂಗ್ರೆಸ್
 

 ಗ್ಯಾರಂಟಿ ಕಳೆದುಕೊಂಡ ಕಾಂಗ್ರೆಸ್

ಕುಯಿಲಾಡಿ ಸುರೇಶ್ ನಾಯಕ್

by Kundapur Xpress
Spread the love

ಉಡುಪಿ : ರಾಜ್ಯದಲ್ಲಿ ಅಧಿಕಾರಕ್ಕೆ ಏರಲೇಬೇಕೆಂಬ ಏಕೈಕ ಉದ್ದೇಶವನ್ನಿಟ್ಟುಕೊಂಡು ಬದ್ಧತೆ ಇಲ್ಲದ ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಜನಹಿತ ಮತ್ತು ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು, ಗ್ಯಾರಂಟಿಗಳ ವ್ಯವಸ್ಥಿತ ನಿರ್ವಹಣೆಯನ್ನೂ ಕಡೆಗಣಿಸಿ ಭ್ರಷ್ಟಾಚಾರ, ಕಮಿಷನ್ ದoಧೆ, ಬಣ ರಾಜಕೀಯ, ಆಡಳಿತ ವೈಫಲ್ಯದ ಜೊತೆಗೆ ಸರಕಾರದ ಅಸ್ತಿತ್ವದ ಗ್ಯಾರಂಟಿಯನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಉಚಿತ 5 ಕೆ.ಜಿ. ಅಕ್ಕಿ ವಿತರಣೆಯ ಸೌಲಭ್ಯವನ್ನು ದೇಶದಾದ್ಯಂತ ಮುಂದಿನ 5 ವರ್ಷಗಳ ಅವಧಿಗೆ ವಿಸ್ತರಿಸಿರುವುದು ರಾಜ್ಯದ ಫಲಾನುಭವಿಗಳಿಗೆ ವರದಾನವಾಗಿದೆ. ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿಯನ್ನು ಫ್ರೀ ಯಾಗಿ ನೀಡುತ್ತೇವೆ ಎಂದು ಬೊಬ್ಬಿರಿದಿದ್ಧ ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನುಡಿದಂತೆ ನಡೆಯದೆ, ಇದೀಗ ಕೇಂದ್ರ ಬಿಜೆಪಿ ಸರಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನೂ ಸಮರ್ಪಕವಾಗಿ ವಿತರಿಸದೆ ರಾಜ್ಯದ ಜನತೆಗೆ ದ್ರೋಹ ಎಸಗಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ ಸರ್ವರ್ ಗ್ರಹಣ ಹಿಡಿದರೆ, ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರ ಬವಣೆ ಕೇಳುವವರಿಲ್ಲದಂತಾಗಿದೆ. ಗೃಹ ಜ್ಯೋತಿ ಬದಲಿಗೆ ಪವರ್ ಕಟ್ ಭಾಗ್ಯ ನೀಡಿ ಕತ್ತಲ ಸಾಮ್ರಾಜ್ಯ ನಿರ್ಮಾಣವಾಗಿದ್ದರೆ, ಯುವನಿಧಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಕಾರಣವಾಗಿರುವ ಉಚಿತ, ಖಚಿತ, ಖಂಡಿತ, ನಿಶ್ಚಿತಗಳ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಜೊತೆಗೆ ಕಮಿಷನ್ ದಂಧೆ ಮೂಲಕ ಸಂಗ್ರಹಿಸಿದ ಅಕ್ರಮ ಹಣವನ್ನು ಪಂಚರಾಜ್ಯಗಳ ಚುನಾವಣೆಗೆ ಕಳುಹಿಸಿಕೊಡಲು ರಾಜ್ಯ ಎಟಿಎಂ ಸರಕಾರ ಹರಸಾಹಸಪಡುತ್ತಿರುವುದನ್ನು ಕಂಡು ರಾಜ್ಯದ ಜನತೆ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದಿದ್ಸಾರೆ

   

Related Articles

error: Content is protected !!