Home » 3 ರಾಜ್ಯಗಳನ್ನು ಮುಡಿಗೆರಿಸಿಕೊಂಡ ಬಿಜೆಪಿ
 

3 ರಾಜ್ಯಗಳನ್ನು ಮುಡಿಗೆರಿಸಿಕೊಂಡ ಬಿಜೆಪಿ

by Kundapur Xpress
Spread the love

ಬೆಂಗಳೂರು :ಪಂಚ ರಾಜ್ಯಗಳ ಚುನಾವಣೆಯಲ್ಲಿ ದೇಶದ ಹೃದಯ ಭಾಗದಲ್ಲಿ ಬಿಜೆಪಿ ಭಾರಿ ಜನ ಬೆಂಬಲದೊಂದಿಗೆ ಮೂರು ರಾಜ್ಯಗಳಲ್ಲಿ ಜಯ ಗಳಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಮುನ್ನುಡಿ ಬರೆದಿದ್ದು ಮತ್ತೋಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಲ್ಲಿ ಕುಳ್ಳರಿಸಲು ಬಿಜೆಪಿ ಪಣ ತೊಟ್ಟಿದೆ

ಇದರಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಐಎನ್‌ಡಿಐಎ ಮೈತ್ರಿಕೂಟ ರಚಿಸಿಕೊಂಡು, ಬಿಜೆಪಿ ಸೋಲಿಸಲು ಹೊರಟಿದ್ದ ಪಕ್ಷಗಳಿಗೆ ಮತದಾರ ಭಾರಿ ಏಟು ನೀಡಿದ್ದಾನೆ. ಲೋಕಸಭೆ ಚುನಾವಣೆಗೂ ಆರು ತಿಂಗಳು ಮೊದಲೇ ನಡೆದಿರುವ ಈ ರಾಜ್ಯಗಳ ಚುನಾವಣೆಯ ಪರಿಣಾಮ ಲೋಕಸಭೆ ಚುನಾವಣೆಯ ಮೇಲಾಗುತ್ತದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಈ ಫಲಿತಾಂಶ ಬಿಜೆಪಿಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕಿದ್ದರೂ, ಬಿಜೆಪಿ ಗಮನಾರ್ಹ ಬೆಳವಣಿಗೆ ಕಂಡಿದೆ.

 

Related Articles

error: Content is protected !!