121
ಕುಂದಾಪುರ : ನಗರದ ರೋಯಲ್ ಕ್ಲಬ್ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಕೇಂದ್ರ ಜೆ ಸಿ ಐ ಕುಂದಾಪುರ ಹಾಗೂ ಮಾರ್ಕೆಟ್ ಬಾಯ್ಸ್ ಫಿಶ್ ಮಾರ್ಕೆಟ್ ರಸ್ತೆ ಕುಂದಾಪುರ ಇವರ ಆಶ್ರಯದಲ್ಲಿ ನಾಳೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಲಿದೆ,
ದಿನಾಂಕ 15.08.2025ರ ಶುಕ್ರವಾರ ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸೊಸೈಟಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಜರುಗಲಿದೆ ಎಂದು ರೋಯಲ್ ಕ್ಲಬ್ ಅಧ್ಯಕ್ಷರಾದ ಪ್ರಮೋದ್ ತಿಳಿಸಿದ್ದಾರೆ
ಕಳೆದ 20 ವರ್ಷಗಳಿಂದ ರೋಯಲ್ ಕ್ಲಬ್ ಸಂಸ್ಥೆಯು ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬಂದಿದೆ

