ಕುಂದಾಪುರ : ನಗರದ ಚಿಕ್ಕನ್‌ಸಾಲ್ ರಸ್ತೆಯ ರಾಯಲ್ ಕ್ಲಬ್ ಇದರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು ಕುಂದಾಪುರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಹಾಗೂ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು 47 ಯೂನಿಟ್ ರಕ್ತವನ್ನು ಸಂಗ್ರಹಿಸಿ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ರಕ್ತ ನಿಧಿ ಕೇಂದ್ರಕ್ಕೆ ನೀಡಲಾಯಿತು

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಜಯಕರ ಶೆಟ್ಟಿ ಕಾರ್ಯದರ್ಶಿಗಳಾದ ವೈ ಸೀತಾರಾಮ ಶೆಟ್ಟಿ ಸದಸ್ಯರಾದ ಗಣೇಶ್ ಆಚಾರ್ಯ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ನ ಅಧ್ಯಕ್ಷರಾದ ನಾಗರಾಜ್ ಕೆ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ನಾಗರಾಜ್ ಖಾರ್ವಿ
ಸದಸ್ಯರಾದ ಮನೋಹರ್ ಶರತ್ ಎಸ್ ಖಾರ್ವಿ ಶಶಿಕಾಂತ್ ಎಸ್ ಖಾರ್ವಿ ಶೇಖರ್ ಜಿ ಖಾರ್ವಿ ಮಂಜುನಾಥ್ ಪೂಜಾರಿ ಉದಯ ದೇವಾಡಿಗ ಧನ್ಪಾಲ್ ಪುತ್ರನ್ ಸುರೇಶ್ ಪುತ್ರನ್ ಮನೋಹರ್ ಹಾಗೂ ರೋಯಲ್ ಕ್ಲಬ್ ನ ಅಧ್ಯಕ್ಷರಾದ ಸಂತೋಷ್ ಮಾಣಿಮನೆ ಕಾರ್ಯದರ್ಶಿ ನಿತ್ಯಾನಂದ ಪ್ರಕಾಶ್ ಕೆ ಮುಂತಾದವರು ಉಪಸ್ಥಿತರಿದ್ದರು

