Home » ತ್ರಿಶಾ ವಿದ್ಯಾ ಕಾಲೇಜು : ಪುಸ್ತಕ ಬಿಡುಗಡೆ
 

ತ್ರಿಶಾ ವಿದ್ಯಾ ಕಾಲೇಜು : ಪುಸ್ತಕ ಬಿಡುಗಡೆ

by Kundapur Xpress
Spread the love

ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಬಿ.ಕಾಂ ಪಠ್ಯ ಆಧಾರಿತ ” ಇ- ಕಾಮರ್ಸ್ ” ಪಠ್ಯಪುಸ್ತಕ ಹಾಗೂ ಬಿಸಿಎ‌‌ ಪಠ್ಯ ಆಧಾರಿತ “ಆನ್ಸರ್ಸ್ ಟು ಜಾವಾ ಪ್ರಶ್ನೆಗಳು” ಶೀರ್ಷಿಕೆಯ ಪಠ್ಯ ಪುಸ್ತಕಗಳನ್ನು ಮಾಹೆ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕರಾದ ಡಾ| ಕರುಣಾಕರ್ ಎ ಕೋಟೆಗಾರ್ ಬಿಡುಗಡೆಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಆಲಿಸುವುದರ ಮಹತ್ವ ಹಾಗೂ ಆ ಆಲಿಕೆಯ ವಿಷಯಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷರು ಹಾಗೂ ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಅವರು ಪುಸ್ತಕದ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದರು.

ಬಿಸಿಎ ಪಠ್ಯಪುಸ್ತಕ ಬರೆದಿರುವ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ನಾರಾಯಣ್ ರಾವ್ ಹಾಗೂ ಬಿ.ಕಾಂ  ಪಠ್ಯಪುಸ್ತಕ ಬರೆದಿರುವ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ರಾಮ್ ದಾಸ್ ನಾಯಕ್ ಹಾಗೂ ಅನ್ವಿತಾ ಇವರು ತಮ್ಮ ಅನುಭವಗಳನ್ನು ಪ್ರಸ್ತುತಪಡಿಸಿದರು. ಈ ಶುಭ ಸಮಾರಂಭದಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಬಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು  ಅಧ್ಯಾಪಕರಾದ ವಿದ್ವಾನ್ ವಾಗೀಶ್ ಭಟ್ ನಿರೂಪಿಸಿ, ಶ್ವೇತಾ ಆಚಾರ್ಯ ವಂದಿಸಿದರು.

   

Related Articles

error: Content is protected !!