ಕೋಟ : ಮಕ್ಕಳು ನೋಡಿದ್ದನ್ನು ಮಾಡುತ್ತಾರೆ ಕೇಳಿದ್ದನ್ನು ಮಾಡುವುದಿಲ್ಲ ಎಂಬ ಮಾತನ್ನು ಕ್ರಿಯಾತ್ಮಕ ಚಟುವಟಿಕೆಯ ಮೂಲಕ ಮಾಡಿ ತೋರಿಸಿ ಹೆತ್ತವರ ಪಾತ್ರ ಮಕ್ಕಳನ್ನು ಬೆಳೆಸುವಲ್ಲಿ ಹೇಗಿರಬೇಕು ಈಗಿನ ಕಾಲದಲ್ಲಿ ಬೆಳೆಯುವ ಮಕ್ಕಳ ಗುಣ ಲಕ್ಷಣದ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಗುರುಗಳ ಕರ್ತವ್ಯವೇನು ಗುರುವಾದವರು ಹೇಗಿರಬೇಕು ಎಂಬುವ ವಿಚಾರವನ್ನು ನಿವೃತ್ತ ಅಧ್ಯಾಪಕ ಶ್ರೀಪತಿ ಹೇರ್ಳೆ ಪೋಷಕರಿಗೆ ಎಳೆಎಳೆಯಾಗಿ ವಿವರಿಸಿದರು
ಭಾನುವಾರ ಶ್ರೀ ಸಿದ್ದಿ ಸಭಾಗೃಹ ಕುಂಭಾಶಿಯಲ್ಲಿ ನೆಡೆದ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ನಿಮ್ಮ ಊರಿನ ಅಥವಾ ನಿಮ್ಮ ಸಮೀಪದ ಸರ್ಕಾರಿ ಶಾಲೆಗಳಿಗೆ ನಿಮ್ಮ ಕೈಲಾದ ದೇಣಿಗೆ ನೀಡುವುದರ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಕಾರಣೀಕರ್ತರಾಗಿ ಎಂಬ ಕಿವಿಮಾತನ್ನಾಡಿದವರು.
ಅತಿಥಿಗಳಾಗಿ ಹಿರಿಯ ವಿದ್ಯಾಭಿಮಾನಿ ಮಂಜುನಾಥ ರಾವ್, ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಮಹಾ ಪೆÇೀಷಕ,ಶ್ರೀ ಸಿದ್ದಿ ಸಭಾಗೃಹದ ಮಾಲಿಕ ಶ್ರೀಧರ್ ಉಪಾಧ್ಯಾಯ , ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ, ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ,ತಾಲೂಕು ಯುವವಿಪ್ರ ವೇದಿಕೆಯ ಅಧ್ಯಕ್ಷ ಅವನೀಶ ಹೊಳ್ಳ,ಪುಸ್ತಕದ ಪ್ರಾಯೋಜಕರಾದ ಸತ್ಯನಾರಾಯಣ ಹೆಬ್ಬಾರ್ ಕೊಮೆ,ಪ್ರತಿಭಾ ಪುರಸ್ಕಾರದ ಪ್ರಾಯೋಜಕ ರಾಮಮೂರ್ತಿ ಪುರಾಣಿಕ ಮತ್ತು ರಾಮಚಂದ್ರ ಹೊಳ್ಳ,ವಲಯದ ಅಧ್ಯಕ್ಷ ರಮೇಶ್ ಚಾತ್ರ, ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ ಉಪಸ್ಥಿತರಿದ್ದರು.
ವಿದುಷಿ ಜಯಂತಿ ಉಪಾಧ್ಯ ಪ್ರಾರ್ಥಿಸಿದರು.ವಲಯದ ಕಾರ್ಯದರ್ಶಿ ರಾಘವೇಂದ್ರ ಪುರಾಣಿಕ ಸ್ವಾಗತಿಸಿದರು.ರಾಮಚಂದ್ರ ಉಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಲಕ್ಷ್ಮೀನಾರಾಯಣ ವೈದ್ಯ ಹಾಗೂ ರಾಮಚಂದ್ರ ಹಂದೆ ಅತಿಥಿಗಳ ಪರಿಚಯಿಸಿದರು. ಪ್ರತಿಭಾ ಪುರಸ್ಕಾರವನ್ನು ರೋಹಿಣಿ ಹತ್ವಾರ್,ಅಭಿನಂದನಾ ಕಾರ್ಯಕ್ರಮವನ್ನು ಶ್ರೀಶೈಲಾ ಅಡಿಗ, ಪುಸ್ತಕ ವಿತರಣಾ ಕಾರ್ಯಕ್ರಮವನ್ನು ವಿಷ್ಣುಮೂರ್ತಿ ಹೆಬ್ಬಾರ್,ಗಾಯತ್ರಿ ಹತ್ವಾರ್,ಶ್ರೀನಿವಾಸ ವೈದ್ಯ ಹಾಗೂ ಭಾಗ್ಯಲಕ್ಷ್ಮಿ ವೈದ್ಯ ನೆಡೆಸಿಕೊಟ್ಟರು.
ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದು ಪ್ರಥಮ,ದ್ವಿತೀಯ ಸ್ಥಾನ ಪಡೆದ ವಲಯದ ಸರ್ಕಾರಿ ಶಾಲಾ ಮಕ್ಕಳನ್ನು ಪ್ರತಿಭಾ ಪುರಸ್ಕರಿಸಲಾಯಿತು.
ಒಂದರಿಂದ ಏಳನೇ ತರಗತಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಲಯದ ವಿಪ್ರ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯ್ತು.ಹತ್ತು ಮತ್ತು ಹನ್ನೆರಡನೇ ತರಗತಿಯನ್ನು ಸರ್ಕಾರೇತರ ಶಾಲೆಯಲ್ಲಿ ಕಲಿತು ಅತೀ ಹೆಚ್ಚು ಅಂಕ ಪಡೆದು ವಲಯದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ವಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ನಿರೂಪಿಸಿದರು.ಖಜಾಂಜಿ ಪದ್ಮನಾಭ ಅಡಿಗ ವಂದಿಸಿದರು.