ಕೋಟ : ಇಲ್ಲಿನ ಸಾಲಿಗ್ರಾಮದ ನಿವಾಸಿ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ಪುತ್ರ ಧೀರಜ್ ಐತಾಳ್ ಇವರಿಗೆ ಕರ್ನಾಟಕ ಸರಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದಾರೆ ಧೀರಜ್ ಪ್ರಾಥಮಿಕ ಶಿಕ್ಷಣವನ್ನು ಚಿತ್ರಪಾಡಿ ಪಿ.ಎಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಿಕ್ಷಣವನ್ನು ಕೋಟದ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಎಂಟನೇ ತರಗತಿಯ ಶಿಕ್ಷಣ ಪಡೆಯುತ್ತಿದ್ದಾರೆ ಇವರ ಹೆಬ್ಬಾವಿನೊಂದಿಗೆ ಸೆಣಸಾಟ ನೋಡುಗರನ್ನು ಬೆರಗಾಗುವಂತೆ ಮಾಡಿದ್ದು ವಿಶೇಷವಾಗಿದೆ, ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ನೆರೆಹಾವಳಿ ಸಂದರ್ಭದಲ್ಲಿ ಕಾಣಿಸಿಕೊಂಡ 80ಕ್ಕೂ ಅಧಿಕ ಹೆಬ್ಬಾವನ್ನು ಹಿಡಿದು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಅಲ್ಲದೆ ಅದೆಷ್ಟೊ ನಾಗರಹಾವು ಹಿಡಿಯುವುದರಲ್ಲಿ ನೈಪುಣ್ಯತೆ ಹೊಂದಿದ ಈತನ ಸಾಹಸಗಾಧೆಗೆ ಜನ ಫಿಧಾ ಹೇಳಿದ್ದಾರೆ.