Home » ಬೆಚ್ಚಿಬೀಳಿಸುವ ಕೊಲೆಯತ್ನ : ಆರೋಪಿತೆಯ ಬಂಧನ
 

ಬೆಚ್ಚಿಬೀಳಿಸುವ ಕೊಲೆಯತ್ನ : ಆರೋಪಿತೆಯ ಬಂಧನ

by Kundapur Xpress
Spread the love

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬೆಚ್ಚಿಬೀಳಿಸುವ ಕೊಲೆಯತ್ನ ಹಾಗೂ ಸುಲಿಗೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದು, ಆರೋಪಿತೆಯಾಗಿ ಮಹಿಳೆಯನ್ನು ಬಂಧಿಸಿದ್ದಾರೆ.

ಶಾಂತಿನಗರದ ಸುದರ್ಶನ ಕಾಂಪ್ಲೆಕ್ಸ್‌ನಲ್ಲಿ ಸ್ನೇಹಿತೆಯರೊಂದಿಗೆ ವಾಸವಾಗಿದ್ದ ಯೋಗಿತಾ ಎಂಬ ಯುವತಿ ಮೇಲೆ ಕಾಂಕ್ರಿಟ್ ಕಲ್ಲಿನಿಂದ ಹಲ್ಲೆ ನಡೆಸಿ, ಆಕೆಯ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಗಳನ್ನು ದೋಚಿದ ಘಟನೆ ಮೇ 13ರಂದು ಬೆಳಕಿಗೆ ಬಂದಿತ್ತು.

ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳಿಗ್ಗೆ ರೂಮಿಗೆ ಮರಳಿದ ಸ್ನೇಹಿತೆಯರು, ಯೋಗಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣವೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಮಾಹಿತಿ ಆಧರಿಸಿ, ಅದೇ ಕಟ್ಟಡದ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಸುಷ್ಮಾ ಅಣ್ಣಪ್ಪ ನಾಯ್ಕ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿತೆ ಹಣಕಾಸಿನ ಸಂಕಷ್ಟದಿಂದ ಯೋಗಿತಾಳ ಚಿನ್ನಾಭರಣ ದೋಚುವ ಉದ್ದೇಶದಿಂದ, ಆಕೆ ಮಲಗಿದ್ದ ವೇಳೆ ಕಾಂಕ್ರಿಟ್ ಬ್ಲಾಕ್ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.ಈ ಪ್ರಕರಣದ ತನಿಖಾ ತಂಡದಲ್ಲಿ ಶ್ರೀ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿ ಪೊಲೀಸ್‌ ಉಪನಿರೀಕ್ಷಕರಾದ ತಿಮ್ಮೇಶ್‌ ಬಿ ಎನ್‌, ಪಿಎಸ್‌ ಐ ಶಂಭುಲಿಂಗಯ್ಯ ಹಾಗೂ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ಎಎಸ್‌ಐ ವಿವೇಕ್‌, ಹೆಚ್‌ ಸಿ 1162, ಹೆಚ್‌ ಸಿ 1185 ಚೇತನ್‌,‌ ಹೆಚ್‌ ಸಿ 1162 ಅಜ್ಮಲ್‌, ಪಿಸಿ 2507 ರವಿರಾಜ್‌, ಪಿಸಿ 2660 ಮಂಜುನಾಥ್‌, ಉಡುಪಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ಹೆಚ್‌ ಸಿ 108 ಜೀವನ್‌, ಹೆಚ್‌ ಸಿ 164 ಪ್ರಸನ್ನ, ಪಿಸಿ 98 ಮಲ್ಲಯ್ಯ, ಪಿಸಿ 99 ಹೇಮಂತ್‌ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳಾದ ಶ್ರೀ ರಕ್ಷಣ್‌ ಕಾಮತ್‌, ಶ್ರೀಮತಿ ರಶ್ಮಿರವರು ಇದ್ದು ತನಿಖಾ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸುಚಿತ್ರಾ ಹಾಗೂ ಶ್ರೀ ವಿನಾಯಕ ಬಾಳಗದ್ದೆ ರವರು ತನಿಖೆಗೆ ನೆರವಾಗಿರುತ್ತಾರೆ.ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್‌ ಶಂಕರ ಐ.ಪಿ.ಎಸ್‌ ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ, ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಬೆಳ್ಳಿಯಪ್ಪ ರವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಬೇಧಿಸಿ ಆರೋಪಿತೆಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಚಿನ್ನದ ಸರ ಹಾಗೂ ಬೆಂಡೋಲೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ

 

Related Articles

error: Content is protected !!