Home » ಲಂಚ ಸ್ವೀಕಾರ : ಬಂಧನ
 

ಲಂಚ ಸ್ವೀಕಾರ : ಬಂಧನ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಲಿಪಿಕಾ ಸಹಾಯಕನಾದ  ಮಂಜು ಪೂಜಾರಿ ಎಂಬವರನ್ನು ಲಂಚ ಸ್ವೀಕಾರ ಆರೋಪದಡಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ

ಆಲೂರಿನ ಅಣ್ಣಪ್ಪ ದೇವಾಡಿಗ ಎಂಬವರು ನೀಡಿದ ದೂರಿನನ್ವಯ ಉಡುಪಿ ಲೋಕಾಯುಕ್ತ ಡಿ ವೈ ಎಸ್‌ ಪಿ ಪ್ರಕಾಶ್‌ ಪಿ ಸಿ ಯವರ ನೇತೃತ್ವದಲ್ಲಿ ನಗರದ ಫೆರ್ರಿ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಂಚ ಸ್ವೀಕರಿಸಿದ 15.000 ರೂಪಾಯಿಯನ್ನು ವಶಪಡಿಸಿಕೊಂಡು ಮುಂಜು ಪೂಜಾರಿಯವರ ಮೇಲೆ ಆರೋಪ ಪಟ್ಟಿಯನ್ನು ದಾಖಲಿಸಿಕೊಂಡಿದ್ದಾರೆ

ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಅಕ್ರಮವಾಗಿ ಮರ ಸಾಗಿಸುತ್ತಿದ್ದ 407 ಮಿನಿ ಲಾರಿಯನ್ನು ಜಪ್ತಿ ಮಾಡಿದ್ದು ಅದನ್ನು ಬಿಡಿಸುವ ಸಂಬಂಧ ಮೇಲಾಧಿಕಾರಿಗಳಿಗೆ ಕಡತವನ್ನು ಕಳುಹಿಸುವುದಕ್ಕಾಗಿ ಮಂಜು ಪೂಜಾರಿಯವರು ಲಂಚದ ಬೇಡಿಕೆ ಇಟ್ಟಿದ್ದು ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ

ಲೋಕಾಯುಕ್ತ ಮಂಗಳೂರು ಎಸ್ ಪಿ ಸೈಮನ್ ರವರ ನಿರ್ದೇಶನದಲ್ಲಿ ಉಡುಪಿ ಲೋಕಾಯುಕ್ತ ಡಿ ವೈ ಎಸ್‌ ಪಿ ಪಿ ಸಿ ಪ್ರಕಾಶ್ ಮಾರ್ಗದರ್ಶನದಲ್ಲಿ ಇನಸ್ಪೇಕ್ಟರ್‌ ಮಂಜುನಾಥ್ ಹಾಗೂ ರಫೀಕ್ ಮತ್ತು ಎಎಸ್ಐ ನಾಗೇಶ್ ಉಡುಪ ಹಾಗೂ ಸಿಬ್ಬಂದಿಗಳಾದ ನಾಗರಾಜ್ ರಾಘವೇಂದ್ರ ರೋಹಿತ್ ಪ್ರಸನ್ನ ದೇವಾಡಿಗ ರವೀಂದ್ರಗಾಣಿಗ ಸೂರಜ್ ರಮೇಶ್ ಸುಧೀರ್‌ ಈ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

   

Related Articles

error: Content is protected !!