Home » ಸೇತುವೆ ಮೇಲೆ ಸವಾರಿ,ಕಿಡಿಗೆಡಿಗಳು ಪುಡಿಗೈದು ಹಾನಿ
 

ಸೇತುವೆ ಮೇಲೆ ಸವಾರಿ,ಕಿಡಿಗೆಡಿಗಳು ಪುಡಿಗೈದು ಹಾನಿ

by Kundapur Xpress
Spread the love

ಕೋಟ : ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸಂಪರ್ಕಿಸುವ ಸೇತುವೆಯ ಮೇಲ್ ಭಾಗದ ತಡೆ ಆವರಣವನ್ನು ಪುಡಿಗೈದ ಘಟನೆ ಭಾನುವಾರ ನಡೆದಿದೆ. ಸಾಕಷ್ಟು ವರ್ಷಗಳ ಹಿಂದೆ ನಿರ್ಮಾಣಗೊಂಡ ಪಾರಂಪಳ್ಳಿ ಹಾಗೂ ಕೋಡಿ ಸಂಪರ್ಕಿಸುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಆಗ್ರಹ ಕೇಳಿ ಬಂದಿತು.
ಆದರೆ ಕಿಡಿಗೆಡಿಗಳು ರಾತ್ರಿಹೊತ್ತಿನಲ್ಲಿ ಸೇತುವೆಯ ಮೇಲ್ಭಾಗ ಹಾನಿಗೊಳಿಸಿರುವ ಬಗ್ಗೆ ಪಟ್ಟಣಪಂಚಾಯತ್ ಬೇಸರ ವ್ಯಕ್ತಪಡಿಸಿದ್ದು ಕಿಡಿಗೆಡಿಗಳ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದೆ.

ಡೆಂಜರ್ ಸೇತುವೆ
ಈ ಸೇತುವೆ ಶಿಥಿಲಾವಸ್ಥೆಗೊಂಡ ಹಿನ್ನಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲು ವಾಹನ ಚಾಲಕರು ಪಾದಚಾರಿಗಳು ಸಾಕಷ್ಟು ಬಾರಿ ಆಗ್ರಹಿಸಿದವು ಅಲ್ಲದೆ ಸೇತುವೆ ಮೇಲ್ಭಾಗದಲ್ಲಿ ಹೊಂಡಗುಂಡಿಗಳು ನಿರ್ಮಾಣಗೊಂಡ ಸಂದರ್ಭದಲ್ಲೂ ಆಟೋ ಚಾಲಕರು ಕಾಂಕ್ರೀಟ್ ಎರೆದು ಹೊಂಡ ಗುಂಡಿಗಳಿಗೆ ಮುಕ್ತದೊರಕಿಸಿದ್ದರು.ಆದರೆ ಇದೀಗ ಸೇತುವೆ ಹಾನಿಗೊಳಿಸಿದ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರಲ್ಲದೆ ಜನಸಾಮಾನ್ಯರ ಸಂಚಾರಕ್ಕೆ ಕುತ್ತು ಬರಲಿದೆ ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸಿ ಅಥವಾ ಹೊಸ ಸೇತುವೆ ನಿರ್ಮಾಣಗೊಳ್ಳುವರೆಗೆ ಮೇಲ್ಭಾಗಕ್ಕೆ ತಾತ್ಕಾಲಿಕ ಮುಕ್ತಿಗಾಣಿಸಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪಟ್ಟಣಪಂಚಾಯತ್ ಸದಸ್ಯೆ ಅನುಸೂಯ ಹೇರ್ಳೆ,ರೇಖಾ ಕೇಶವ ಕರ್ಕೆರ,ಕರುಣಾಕರ ಪೂಜಾರಿ,ಬಿಜೆಪಿ ಮುಖಂಡರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೊಸ ಸೇತುವೆಯ ಪ್ರಕ್ರಿಯೆ
ಇಲ್ಲಿನ ಈ ಸೇತುವೆ ಶಿಥಿಲಾವಸ್ಥೆ ತಲುಪಿರುವ ಹಿನ್ನಲ್ಲೆಯಲ್ಲಿ ಆಗಿನ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೇಂದ್ರ ಸರಕಾರದ ಯೋಜನೆಯ ಮೂಲಕ 6 ಕೋಟಿ ಹಣ ಕಾಯ್ದಿರಿಸಿದ್ದು ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿರುವ ಬಗ್ಗೆ ಪಿಡಬ್ಲೂಡಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದ್ದು ಕಾಮಗಾರಿಗೆ ಸಿಆರ್‍ಝಡ್ ಸಮಸ್ಯೆ ಅಡ್ಡಿ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬಗೊಂಡಿದೆ ಎನ್ನಲಾಗಿದೆ.ಸೇತುವೆ ಮೇಲ್ಭಾಗ ತಾತ್ಕಾಲಿಕ ತಡೆಬೇಲಿ ನಿರ್ಮಿಸುವುದಾಗಿ ಹೇಳಿದ್ದಾರೆ.

ಹೊಸ ಸೇತುವೆ ನಿರ್ಮಾಣಕ್ಕೆ ಆಗಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಣ ಕಾಯ್ದಿರಿಸಿದ್ದು ಪ್ರಸ್ತುತ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅದರ ಬಗ್ಗೆ ಕಾಯೋನ್ಮುಖವಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸಿಆರ್ ಝಡ್ ತೊಡಕು ಶೀಘ್ರಗತಿ ಪರಿಹರಿಸಿ ಕಾಮಗಾರಿ ನಡೆಯಲಿ ಎಂದು ಆಗ್ರಹಿಸಿದ್ದಾರೆ

   

Related Articles

error: Content is protected !!