ಕುಂದಾಪುರ : ಕುಂದಾಪುರ ನಗರದ ಚಿಕ್ಕನ್ ಸಾಲ್ ರಸ್ತೆಯ ಪರಿಸರದಲ್ಲಿ ಕಳೆದ ಹಲವಾರು ದಿನಗಳಿಂದ ಗೂಳಿವೊಂದು ಸಾರ್ವಜನಿಕರ ಮೇಲೆ ಎರಗುತ್ತಿದ್ದು ಅದನ್ನು ಕೊನೆಗೂ ಹೆಡೆಮುರಿ ಕಟ್ಟಿ ಹೂವಿನಕೆರೆಯಲ್ಲಿರುವ ಕಾಮಧೇನು ಗೋ ಸುರಕ್ಷಾ ಕೇಂದ್ರಕ್ಕೆ ರವಾನಿಸಲಾಯಿತು
ನಗರದ ಚಿಕ್ಕನ್ ಸಾಲ್ ರಸ್ತೆಯ ಪರಿಸರದಲ್ಲಿ ಶಾಲೆಗೆ ತೆರಳುವ ಮಕ್ಕಳು ವಾಹನ ಸವಾರರ ಹಾಗೂ ಸಾರ್ವಜನಿಕರ ಮೈಮೇಲೆ ಗೂಳಿಯು ಎರಗಿ ತೊಂದರೆ ಕೊಡುತ್ತಿತ್ತು
ಪುರಸಭಾ ಸದಸ್ಯರಾದ ಸಂತೋಷ್ ಶೇಟ್ಟಿಯವರ ನೇತೃತ್ವದಲ್ಲಿ ಪುರಸಭೆಯ ಪೌರ ಕಾರ್ಮಿಕರು ಹಾಗೂ ಯು.ಕೃಷ್ಣಮೂರ್ತಿ ಸಂತೋಷ್ ಮೆಂಡನ್ ಪ್ರಶಾಂತ್ ಮೊಗವೀರರವರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಗೋಶಾಲೆಗೆ ರವಾನಿಸಲಾಯಿತು