ಬೈಂದೂರು : ಪಶುವೈದ್ಯಾಧಿಕಾರಿಗಳ ಹುದ್ದೆ ಖಾಲಿ ಬಿದ್ದಿರುವುದರಿಂದ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ವಿಧಾನ ಸಭಾ ಅಧಿವೇಶನ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಯವರು ಗಮನ ಸೆಳೆದಿದ್ದರು. ಇದಕ್ಕೆ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಉತ್ತರಿಸಿ, ರಾಜ್ಯದಲ್ಲಿ ಈ ಹಿಂದೆ ಪಶು ವೈದ್ಯಧಿಕಾರಿಗಳ ನೇಮಕಾತಿ ಆಗಿದ್ದರೂ ರಾಜ್ಯದ ಕರಾವಳಿ ಭಾಗದಲ್ಲಿ ಯಾವಾಗಲೂ ವೈದ್ಯಧಿಕಾರಿಗಳ ಕೊರತೆ ಇದೆ. ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆ ಗಳಲ್ಲಿ ಮಂಜೂರಾದ 58 ಹುದ್ದೆಗಳ ಪೈಕಿ 9 ಹುದ್ದೆಗಳು ಮಾತ್ರ ಭರ್ತಿ ಯಾಗಿದ್ದು 49 ಹುದ್ದೆಗಳು ಖಾಲಿ ಇವೆ. ಶೀಘ್ರವಾಗಿ ಪಶು ವೈದ್ಯಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕಾತಿಗೆ ಕ್ರಮ ವಹಿಸಲಾಗುವುದೆಂದು ಹೇಳಿದ್ದರು. ಅದರಂತೆ ಇದೀಗ ಪಶು ಆಸ್ಪತ್ರೆ ಗಳಲ್ಲಿ ಖಾಲಿ ಇರುವ ಪಶು ವೈದ್ಯಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರ ಬಿದ್ದಿದೆ.