Home » ಬಡವರಿಗೆ ಹಕ್ಕು ಪತ್ರ ವಿತರಣೆಯೇ ಪ್ರಥಮ ಆದ್ಯತೆ : ಬೈಂದೂರು ಹೋಬಳಿ ಹಕ್ಕು ಪತ್ರ ವಿತರಣೆಯಲ್ಲಿ ಶಾಸಕ ಗಂಟಿಹೊಳೆ
 

ಬಡವರಿಗೆ ಹಕ್ಕು ಪತ್ರ ವಿತರಣೆಯೇ ಪ್ರಥಮ ಆದ್ಯತೆ : ಬೈಂದೂರು ಹೋಬಳಿ ಹಕ್ಕು ಪತ್ರ ವಿತರಣೆಯಲ್ಲಿ ಶಾಸಕ ಗಂಟಿಹೊಳೆ

by Kundapur Xpress
Spread the love

ಬೈಂದೂರು : ತಾಲೂಕು ಕಚೇರಿ ಪ್ರಜಾ ಸೌಧದ ಕೋರ್ಟ್ ಹಾಲ್ ನಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಹಾಗೂ 94 ಸಿಸಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ವಿತರಿಸಿದರು. ಬಳಿಕ ಮಾತನಾಡಿದ ಶಾಸಕರು ಕ್ಷೇತ್ರದಲ್ಲಿ ಹಕ್ಕು ಪತ್ರ ವಂಚಿತರಿಗೆ ಕಾನೂನು ತೊಡಕುಗಳನ್ನು ನಿವಾರಿಸಿ ಕೊಂಡು ಅರ್ಹರಿಗೆ ಭೂಮಿ ಹಕ್ಕು ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕಳೆದ ವಾರ ವಂಡ್ಸೆ ಹೋಬಳಿಯಲ್ಲಿ 50 ಕ್ಕೂ ಮಿಕ್ಕಿದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಗಿದೆ. ಪ್ರಸ್ತುತ ಕ್ಷೇತ್ರದ ಅರ್ಹ 24 ಕುಟುಂಬಕ್ಕೆ 94 ಸಿ ಹಾಗೂ 94 ಸಿಸಿ ಅಡಿ ಹಕ್ಕು ಪತ್ರ ವಿತರಿಸಲಾಗಿದೆ.ಬಡ ಜನರಿಗೆ ಹಕ್ಕು ಪತ್ರ ಒದಗಿಸುವುದೇ ಪ್ರಮುಖ ಆದ್ಯತೆಯನ್ನಾಗಿ ಇಟ್ಟು ಕೊಳ್ಳಲಾಗಿದೆ ಎಂದರು.

24 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕರು :

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು, ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ 09 ಫಲಾನುಭವಿಗಳಿಗೆ 94 ಸಿಸಿ ಹಾಗೂ ಗೋಳಿಹೊಳೆ, ಜಡ್ಕಲ್, ಮುದೂರು, ಯಳಜಿತ್, ನಾಡ, ನಾವುಂದ, ಕಾಲ್ತೊಡು ಹಾಗೂ ಬಿಜೂರು ಗ್ರಾಮಗಳ 15 ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ್ ರಾಮಚಂದ್ರಪ್ಪ, ಕಂದಾಯ ನಿರೀಕ್ಷಕರಾದ ಉಪೇಂದ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Articles

error: Content is protected !!