ಎಕ್ಸಲೆಂಟ್ ಕುಂದಾಪುರ: ವಿಶ್ವ ಸಂಸ್ಕೃತ ದಿನ ಹಾಗೂ ರಕ್ಷಾಬಂಧನ ಸಂಭ್ರಮಾಚರಣೆ

by Kundapur Xpress
Spread the love

ಕುಂದಾಪುರ : ಭಾರತೀಯ ಸನಾತನ ಸಂಸ್ಕೃತಿಯ ಅನರ್ಘ್ಯ ರತ್ನಗಳಾದ ಭಾಷೆ ಮತ್ತು ಬಾಂಧವ್ಯದ ಸಂಕೇತಗಳನ್ನು ಸೇರಿಸುವ ಉದ್ದೇಶದಿಂದ, ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಸಂಸ್ಕೃತ ದಿನ ಹಾಗೂ ರಕ್ಷಾಬಂಧನ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವೆಂಕಟೇಶ್ ಮೂರ್ತಿ ಎನ್ ಸಿ ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಂದು ಭಾರತೀಯ ಹಬ್ಬಗಳ ಹಿಂದೆ ಆಳವಾದ ಸಂಸ್ಕೃತ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ. ಹಬ್ಬಗಳ ಮಹತ್ವ ಮತ್ತು ಹಿನ್ನೆಲೆಯನ್ನು ಅರಿತು ಆಚರಿಸಿದಾಗ ಮಾತ್ರ ಅವುಗಳ ನೈಜ ಅರ್ಥ ಲಭಿಸುತ್ತದೆ ಎಂದು ಹೇಳಿದರು. ರಕ್ಷಾಬಂಧನದ ಪವಿತ್ರತೆಯನ್ನು ವಿವರಿಸಲು ಶ್ರೀ ಕೃಷ್ಣ ಹಾಗೂ ದ್ರೌಪದಿಯ ನಡುವಿನ ಸಹೋದರತ್ವದ ಪ್ರಸಂಗವನ್ನು ಉದಾಹರಣೆಸಿದರು. ರಕ್ಷಾಬಂಧನವೂ ಕೇವಲ ಒಂದು ದಾರವನ್ನು ಕಟ್ಟುವ ಆಚರಣೆಯಲ್ಲ ಬದಲಿಗೆ ರಕ್ಷಣೆ ಮತ್ತು ನಂಬಿಕೆಯ ಪವಿತ್ರ ಬಂಧವಾಗಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಅತ್ಯಗತ್ಯ ಮಾನವನ ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಭಗವದ್ಗೀತೆ ಓದುವುದರಿಂದ ಸೂಕ್ತವಾದ ಪರಿಹಾರ ಸಿಗುತ್ತದೆ. ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ ಅದು ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಯನ್ನು ಕಲಿಸುವ ಅತ್ಯುತ್ತಮ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಎಂ ಎಂ ಹೆUÉØ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಶುಭಹಾರೈಸಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷತೆಯಾಗಿ ವಿದ್ಯಾರ್ಥಿನಿಯರನ್ನು ಪರಸ್ಪರ ಎದುರು-ಬದರು ಕುಳ್ಳಿರಿಸಿ ಸಹೋದರತ್ವ ಹಾಗೂ ರಕ್ಷಣೆಯ ಸಂಕೇತವಾದ ರಾಕಿಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಂತರ ಮುಖ್ಯ ಅತಿಥಿಗಳಾದ ವೆಂಕಟೇಶ್ ಮೂರ್ತಿ ಎನ್ ಸಿ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಹೈಸ್ಕೂಲು ವಿಭಾಗದ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚಾರ್ಯ ಸಿಬಿಎಸ್ಸಿ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ, ಸಂಸ್ಕೃತ ಉಪನ್ಯಾಸಕರಾದ ಶುಭೋzï ಉಪಸ್ಥಿತರಿದ್ದರು. ಶಿಕ್ಷಕ ಸಂದೀಪ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 

Related Articles

error: Content is protected !!