Home » ವಿಕಾಸಿತ ಭಾರತ ಸಂಕಲ್ಪಯಾತ್ರೆ
 

ವಿಕಾಸಿತ ಭಾರತ ಸಂಕಲ್ಪಯಾತ್ರೆ

ಶಂಕರನಾರಾಯಣ

by Kundapur Xpress
Spread the love

ಕುಂದಾಪುರ : ಶಂಕರನಾರಾಯಣ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ, ಅಂಚೆ ಮತ್ತು ಸಿಂಡಿಕೇಟ್ ಬ್ಯಾಂಕ್ ಶಂಕರನಾರಾಯಣ ಇವರ ಆಶ್ರಯದಲ್ಲಿ ಹಾಗೂ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ, ಗಂಟಿಹೊಳೆ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರಿ ಎ.ಕಿರಣ್ ಕುಮಾರ್ ಕೊಡ್ಗಿಯವರು ಜೊತೆಯಾಗಿ ಉದ್ಘಾಟಿಸಿದರು

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಅನುಗುಣವಾಗಿ ಸರಕಾರದ ಯೋಜನೆಗಳನ್ನು ತಲುಪುವುದನ್ನು ಖಾತ್ರಿಪಡಿಸುವ ಮೂಲಕ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಖಾತ್ರಿಯನ್ನು ಸಾಧಿಸುವ ಗುರಿಯನ್ನು ಕೂಡ ಹೊಂದಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಹೇಳಿದರು ಈ ಸಂದರ್ಭದಲ್ಲಿ 2024ರ ನರೇಂದ್ರ ಮೋದಿಯವರ ಅಭಿವೃದ್ಧಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು

ಶಂಕರನಾರಾಯಣ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗೆದ್ದೆ, ಅಧ್ಯಕ್ಷತೆ ವಹಿಸಿದರು, ವೇದಿಕೆಯಲ್ಲಿ ಉಪಾಧ್ಯಕ್ಷರಾದ ವತ್ಸಲ ಶೆಟ್ಟಿ  ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸಿತರಿದ್ದರು ಕಾರ್ಯಕ್ರಮದ ಪ್ರಸ್ತಾವಿಕ  ಲೀಡ್ ಬ್ಯಾಂಕಿನ ಮ್ಯಾನೇಜರ್ ಪಿಂಜಾರ್ ಇವರು ನುಡಿದರು. ಶ್ರೀಮತಿ ಮೀರಾ.ಜಿ. ಸೀನಿಯರ್ ಎಫ್.ಎಲ್.ಸಿ. ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ, ಜಿಲ್ಲಾ ಆರೋಗ್ಯ ಮಿತ್ರ ಸೃಜನ್ ಮಾಲಾ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮವರ  ಧನಂಜಯ್,

ರುಡ್ ಸೆಟ್ ಉಡುಪಿ ಡೈರೆಕ್ಟರ್ ಲಕ್ಷ್ಮೀಶ್, ಅಂಚೆ ಇಲಾಖೆ ಕುಂದಾಪುರ ಮಹೇಂದ್ರ, ಸಿಂಡಿಕೇಟ್ ಬ್ಯಾಂಕ್ ಶಂಕರನಾರಾಯಣ ಶಾಖೆಯ ವ್ಯವಸ್ಥಾಪಕರಾದ ಉಮೇಶ್, ಸಿಬ್ಬಂದಿ ಹಾಗೂ ಉಪಸಿತರಿದ್ದರು. ಸಿಂಡಿಕೇಟ್ ಬ್ಯಾಂಕ್, ಶಂಕರನಾರಾಯಣ ಶಾಖೆ ಮ್ಯಾನೇಜರ್ ಉಮೇಶ್ ಸರ್ವರನ್ನು ಸ್ವಾಗತಿಸಿದರು, ಗ್ರಾಮ ಪಂಚಾಯಿತಿನ ಪಿಡಿಒ ಶ್ವೇತಾ ಗೌಡ  ಕಾರ್ಯಕ್ರಮದ ನಿರೂಪಿಸಿ, ವಂದನಾರ್ಪಣೆಗೈದರು

   

Related Articles

error: Content is protected !!