ಬೈಂದೂರು : ಯಳಜಿತ್ ಗ್ರಾಮದ ಸಾತೇರಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾದ ಕಾಲುಸಂಕವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಕ್ಷಣದಲ್ಲೂ ಅಪಾಯ ತಂದೊಡ್ಡಬಹುದಾದ ಈ ಕಾಲುಸಂಕದ ಬದಲಾಗಿ ಶೀಘ್ರವೇ ಆಧುನಿಕ ಮಾದರಿಯ ಕಾಲು ಸಂಕ ನಿರ್ಮಿಸಿಕೊಡುವ ಭರವಸೆ ನೀಡಿದರು.