ಬೈಂದೂರು : ಬೈಂದೂರು ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಹಲವು ಅಡಚಣೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರು ಕ್ಷೇತ್ರದ ನಾಲ್ಕೂ ಜನತಾ ಕಾರ್ಯಲಯಗಳಲ್ಲಿ ನಿರಂತರವಾಗಿ ಗಮನಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾಸಕರು ಬೈಂದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ,
ಕಚೇರಿ ಕೆಲಸಗಳು, ದಾಖಲಾತಿಗಳ ನಿರ್ವಹಣೆ, ಸಾರ್ವಜನಿಕರ ಸಮಸ್ಯೆಗಳ ವಿಲೇವಾರಿಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಚರ್ಚಿಸಿದರು
ಸಾರ್ವಜನಿಕರಿಗೆ ತೊದರೆಯಾಗದಂತೆ ಎಲ್ಲ ಕಾರ್ಯಗಳು ಸುಲಲಿತವಾಗಿ ಆಗಬೇಕು. ಯಾವುದೇ ಸರಕಾರಿ ಕಚೇರಿಗಳಲ್ಲಿ ಕ್ಷೇತ್ರದ ಜನರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು