Home » ಕಾಲುಸಂಕ ನಿರ್ಮಾಣ ಅನುದಾನಕ್ಕೆ ಸರ್ಕಾರದ ಸಕಾರಾತ್ಮಕ ಸ್ಪಂದನೆ
 

ಕಾಲುಸಂಕ ನಿರ್ಮಾಣ ಅನುದಾನಕ್ಕೆ ಸರ್ಕಾರದ ಸಕಾರಾತ್ಮಕ ಸ್ಪಂದನೆ

by Kundapur Xpress
Spread the love

ಬೈಂದೂರು : ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆಗೊಂಡ ಕಾಲುಸಂಕ ಕಾಮಗಾರಿಗಳನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಅವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಜಿಲ್ಲಾ ರಸ್ತೆ ಸೇತುವೆಗಳು – ಬಂಡವಾಳ ವೆಚ್ಚದಡಿ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಹ್ಯಾಮ್ಲೆಟ್ ಗಳಿಗೆ ಸಂಪರ್ಕ ಯೋಜನೆಯಡಿ 7 ಪ್ಯಾಕೇಜ್ ಗಳಲ್ಲಿ ಒಟ್ಟು 23 ಕಾಲುಸಂಕ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ.ಗಳಿಗೆ ಅನುಮೋದನೆ ಗೊಂಡಿದೆ. ಅವುಗಳಲ್ಲಿ 20 ಲಕ್ಷ ಮೊತ್ತದ ಒಂದು ಕಾಮಗಾರಿ ಪೂರ್ಣಗೊಂಡಿದ್ದು. ಉಳಿದಂತೆ 480 ಲಕ್ಷಗಳ 6 ಪ್ಯಾಕೇಜ್ ಕಾಮಗಾರಿ ಗಳು ಪ್ರಾರಂಭವಾ ಗದಿರುವ ಕಾಮಗಾರಿ ಗಳಾಗಿರುವುದರಿಂದ ಆರ್ಥಿಕ ಇಲಾಖೆ ಇದರ ಕಾಮಗಾರಿ ಗಳನ್ನು ತಡೆ ಹಿಡಿದಿದೆ. ಪ್ರಸಕ್ತ ಸಾಲಿನಲ್ಲಿರ ಈ ಲೆಕ್ಕ ಶೀರ್ಷಿಕೆಯಡಿ ಒದಗಿಸಿರುವ ಅನುದಾನ ವನ್ನು ಹಂಚಿಕೆ ಮಾಡಲಾಗಿದ್ದು, ಸದರಿ ಹಂಚಿಕೆಯಾದ ಅನುದಾನದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಿಕೊಂಡು ಬಾಕಿ ಉಳಿಯುವ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು ಎಂದರು.
ಕಾಲುಸಂಕ ನಿರ್ಮಾಣ ಕಾಮಗಾರಿ ವೇಗವಾಗಿ ಸಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಈ ಕಾಮಗಾರಿಗಳಿಗೆ ಅನುದಾನ ಒದಗಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಒತ್ತಾಯಿಸಿದರು.

   

Related Articles

error: Content is protected !!