Home » ವಸತಿ ರಹಿತರಿಗೆ ಶೀಘ್ರ ಮನೆ
 

ವಸತಿ ರಹಿತರಿಗೆ ಶೀಘ್ರ ಮನೆ

ಬಸವ ವಸತಿ ಯೋಜನೆ ಮಂಜೂರಿಗೆ ಕ್ರಮ

by Kundapur Xpress
Spread the love

ಬೈಂದೂರು : ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ಬಸವ ವಸತಿ ಯೋಜನೆಯಡಿ ಮನೆ ಸೌಲಭ್ಯ ನೀಡಲು ಆಯವ್ಯಯ ದಲ್ಲಿ ನಿಗದಿ ಪಡಿಸಿದ ಅನುದಾನಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತ್ ವಾರು ಮನೆ ಗಳ ಗುರಿ ನಿಗದಿ ಪಡಿಸಿ ಮಂಜೂರಾತಿ ನೀಡಲಾಗುವುದೆಂದು ವಸತಿ ಸಚಿವರಾದ ಬಿ. ಝಡ್. ಜಮೀರ್ ಅಹಮ್ಮದ್ ಖಾನ್ ರವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.
ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಇವರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ವಸತಿ ರಹಿತರಿದ್ದು ನಿವೇಶನ ಹೊಂದಿದ್ದು ಹೊಸ ಮನೆ ನಿರ್ಮಾಣಕ್ಕೆ ಸಹಾಯಧನ ಕೋರಿ ಸಾಕಷ್ಟು ಅರ್ಜಿಗಳು ಗ್ರಾಮ ಪಂಚಾಯತ್ ಗಳಿಗೆ ಸಲ್ಲಿಕೆ ಯಾಗುತ್ತಿದ್ದು ಕಳೆದೊಂದು ವರ್ಷಗಳಿಂದ ಸರಕಾರದಿಂದ ಬಸವ ವಸತಿ ಯಡಿ ಮನೆ ನೀಡಿಲ್ಲ ಹಾಗಾಗಿ ಸಹಾಯ ಧನ ಒದಗಿಸಲು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರರು ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018 ರಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆ ಯನ್ನು ನಡೆಸಲಾಗಿದ್ದು ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ 9390 ವಸತಿ ರಹಿತರು ಕಂಡು ಬಂದಿದ್ದು . ಸದರಿ ಸಮೀಕ್ಷೆ ಯ ನಂತರ 2019 ರಿಂದ 2021-22 ರವರೆಗೆ ವಿವಿಧ ವಸತಿ ಯೋಜನೆಗಳಡಿ ಸ್ವಂತ ನಿವೇಶನ ಹೊಂದಿರುವ ಅರ್ಹ 3279 ಜನರಿಗೆ ಮನೆ ಮಂಜೂರು ಮಾಡಲಾಗಿದೆ. ಪ್ರಸ್ತುತ ಆಯವ್ಯಯ ದಲ್ಲಿ ನಿಗದಿ ಪಡಿಸುವ ಅನುದಾನಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತ್ ವಾರು ಮನೆಗಳ ಗುರಿ ನಿಗದಿ ಪಡಿಸಿ ಮಂಜೂರಾತಿ ನೀಡಲಾಗುತ್ತದೆ ಎಂದು ಹೇಳಿದರು.
ವಸತಿ ರಹಿತರಿಗೆ ತಕ್ಷಣವೇ ಮನೆ ಸಿಗುವಂತೆ ಆಗಬೇಕು.‌ಅನಗತ್ಯ ತಾಂತ್ರಿಕ ಕಾರಣದಿಂದ ವಿಳಂಬ ಮಾಡಕೂಡದು ಎಂದು ಶಾಸಕರು ಮನವಿ ಮಾಡಿದರು.

   

Related Articles

error: Content is protected !!