Home » ಕೋರ್ಟ್ ಬೇರೆಡೆ ವರ್ಗಾಯಿಸಲು ಬಿಡುವುದಿಲ್ಲ.
 

ಕೋರ್ಟ್ ಬೇರೆಡೆ ವರ್ಗಾಯಿಸಲು ಬಿಡುವುದಿಲ್ಲ.

ಶಾಸಕ ಗುರುರಾಜ್ ಗಂಟಿಹೊಳೆ

by Kundapur Xpress
Spread the love

ಬೈಂದೂರು : ಬೈಂದೂರಿನ ಸ್ವಾಭಿಮಾನ ತಗ್ಗಿಸುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಘಟನೆಗಳು ನಡೆದಲ್ಲಿ ಬೀದಿಗಿಳಿದು ಹೋರಾಟಕ್ಕೂ ಸಿದ್ಧ. ಅಭಿವೃದ್ಧಿಯಲ್ಲಿ ಬೈಂದೂರು ಸದಾ ಮುಂದಿರಬೇಕು ಎಂಬುದು ನಮ್ಮ ಆಶಯ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಬೈಂದೂರು ಕೋರ್ಟ್ ಕಟ್ಟಡ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರೊಂದಿಗೂ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೈಂದೂರು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬೇಕು. ಈಗ ಬಂದಿರುವ ವ್ಯವಸ್ಥೆಯನ್ನು ಬೇಡ ಎನ್ನುವುದು ಅಥವಾ ಬೇರೆಡೆಗೆ ವರ್ಗಾಯಿಸುವಂತೆ ಕೋರುವುದು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಇಂತಹ ವಿದ್ಯಮಾನಗಳನ್ನು ಸಹಿಸಲು ಸಾಧ್ಯವಿಲ್ಲ.
ಬೈಂದೂರಿನಲ್ಲಿ ಆಗಬೇಕಿರುವ ವ್ಯವಸ್ಥೆಗೆ ಎಲ್ಲರೂ ಒಟ್ಟಾಗಿ ಸಾಂಘಿಕ ಪ್ರಯತ್ನ, ಹೋರಾಟಗಳನ್ನು ಮಾಡಬೇಕೆ ವಿನಃ ಇಲ್ಲಿಂದ ಇನ್ನೊಂದಡೆಗೆ ವರ್ಗಾಯಿಸಿ ಎನ್ನುವುದರಲ್ಲಿ ಅರ್ಥವಿಲ್ಲ. ಸಾಮಾನ್ಯರ ನಿತ್ಯದ ಬದುಕಿನಲ್ಲಿ ನ್ಯಾಯಾಲಯ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ಅದೆಷ್ಟೋ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಣ್ಣ ಸಣ್ಣ ಪ್ರಕರಣಕ್ಕೂ ದೂರದ ಊರುಗಳಿಗೆ ಅಲೆಯುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಬೈಂದೂರಿನಲ್ಲಿ ನ್ಯಾಯಾಲಯ ಸಂಕೀರ್ಣ ಆಗಲೇಬೇಕು ಮತ್ತು ಆಗಲಿದೆ. ಅದನ್ನು ಬೇರೆಡೆಗೆ ವರ್ಗಾಯಿಸಲು ಅಥವಾ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತಿಳಿಸಿದ್ದಾರೆ.

   

Related Articles

error: Content is protected !!