ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಿಸಲು, ಅಗತ್ಯ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.
ಬೈಂದೂರು ವಲಯದ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿ ಮುಖ್ಯಸ್ಥರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ನೀಡಿದರು.
ಬೈಂದೂರು ವಲಯದ 14 ಸರಕಾರಿ ಪ್ರೌಢ ಶಾಲೆ ಹಾಗೂ 5 ಅನುದಾನಿತ ಶಾಲೆಗಳ ಪ್ರತಿನಿಧಿಗಳು ಭಾಗವಹಿಸು, ಎಸ್ ಡಿಎಂಸಿ, ಶಾಲಾ ಶಿಕ್ಷಕರು, ಹಳೇ ವಿದ್ಯಾರ್ಥಿ ಸಂಘ ಪರಸ್ಪರ ಸಮನ್ವಯದಿಂದ ಶಾಲೆಯ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಶ್ರಮಿಸಲು ಶಾಸಕರು ತಿಳಿಸಿದರು
ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಯೋಚನೆ ಬಗ್ಗೆ ಮಾಹಿತಿ ನೀಡಿದ ಶಾಸಕರು, ಇದಕ್ಕೆ ಸಹಕರಿಸುತ್ತಿರುವ ದಾನಿಗಳ ಹಾಗೂ ಸರಕಾರೆತರ ಸಂಸ್ಥೆ ಗಳ ಬೆಂಬಲ ದ ಬಗ್ಗೆ ವಿಚಾರ ವಿನಿಮಯ ಮಾಡಿ ಕೊಂಡರು.
ಪ್ರತಿಯೊಂದು ಶಾಲೆಯೂ ತಮ್ಮ ತಮ್ಮ ಹಂತದಲ್ಲಿಯೇ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆದು ಕಂಪನಿ ಗಳ ಸಿ ಎಸ್ ಆರ್ ಅನುದಾನ ಬಳಸಿ ಕೊಳ್ಳಲು ಪ್ರಯತ್ನಿಸಬೇಕು. ಊರಿನ ದಾನಿಗಳ ಮೂಲಕ ಅಭಿವೃದ್ಧಿಗೆ ಕೊಡುಗೆ ಪಡೆಯಲು ಕರೆ ನೀಡಿದರು
ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ವಿದ್ಯಾರ್ಥಿ ಗಳನ್ನು ಕೂರಿಸದೆ ಮಕ್ಕಳ ಸುರಕ್ಷತೆ ಕಡೆಗೆ ಗಮನ ಹರಿಸಲು ಸೂಚಿಸಿದರು.
ಶಾಲಾ ಆಸ್ತಿ ದಾಖಲೆ ಗಳನ್ನು ಅಸಮರ್ಪಕವಾಗಿ ಇದ್ದಲ್ಲಿ ಸರಿ ಪಡಿಸಿಕೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯತ್ ಸಹಕಾರ ಪಡೆದು ನರೇಗಾ ಯೋಜನೆಯಡಿಯಲ್ಲಿ ಶಾಲೆಗಳ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು.
ನಿಯಮಿತವಾಗಿ ಎಸ್ಡಿಎಂಸಿ ಸಭೆ ನಡೆಸಿ ಶಾಲೆಯ ಮೂಲ ಸೌಕರ್ಯ ಉನ್ನತಿಕರಿಸುವ ಬಗ್ಗೆ, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದ ಜೊತೆಗೆ, ವ್ಯಕ್ತಿತ್ವ ವಿಕಸನ ಹಾಗೂ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ಗಳಿಗೆ ಮಕ್ಕಳನ್ನು ಒಗ್ಗಿ ಕೊಳ್ಳುವಂತೆ ಪೂರಕ ಕ್ರಮಕ್ಕೆ ಚಿಂತಿಸಲು ತಿಳಿಸಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘಗಳನ್ನು ಪುನರ್ ರಚಿಸಿ ಶಾಲಾ ಬಲವರ್ಧನೆಗೆ ಯೋಜನೆ ರೂಪಿಸಬೇಕು. ಅನುದಾನಿತ ಶಾಲೆಗಳ ಕುಂದು ಕೊರತೆಗಳಿಗೂ ಕಿವಿಯಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕೆ ಹಾಗೂ ಶಿಕ್ಷಕರ ಸರಕಾರದಿಂದ ಸಿಗಬೇಕಾದ ನ್ಯಾಯ ಯುತ ಬೇಡಿಕೆಗಳಿಗೆ ಸದಾ ಕಾಲ ಸ್ಪಂದಿಸುದಾಗಿ ಭರವಸೆ ನೀಡಿದರು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಯಲ್ಲಿವಿದ್ಯಾರ್ಥಿಗಳು ಅತ್ಯುನ್ನತ ಅಂಕ ಪಡೆಯಲು ಶ್ರಮ ವಹಿಸಿದ ಶಾಲೆ ಗಳ ಮುಖ್ಯೋಪಾಧ್ಯಾಯರಿಗೆ ಅಭಿನಂದನೆ ಸಲ್ಲಿಸಿದರು. ಈ ವರ್ಷವೂ ಬೈಂದೂರು ಕ್ಷೇತ್ರ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡುವಂತಾಗಲಿ ಎಂದೂ ಶುಭ ಹಾರೈಸಿದರು.