Home » ಬಾಲ್ಯ ವಿವಾಹ ತಡೆಗಟ್ಟಲು ಸೂಕ್ತ ಕ್ರಮ ವಹಿಸಿ
 

ಬಾಲ್ಯ ವಿವಾಹ ತಡೆಗಟ್ಟಲು ಸೂಕ್ತ ಕ್ರಮ ವಹಿಸಿ

ಸರಕಾರಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಒತ್ತಾಯ

by Kundapur Xpress
Spread the love

ಬೈಂದೂರು : ರಾಜ್ಯದಲ್ಲಿ 2023 24 ಹಾಗೂ 2024 25 ನೇ ಸಾಲಿನಲ್ಲಿ ನಡೆದಿರುವ ಬಾಲ್ಯ ವಿವಾಹ ಹಾಗೂ ಈ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಸರಕಾರ ಕೈಗೊಂಡ ಕಾನೂನು ಕ್ರಮಗಳ ಹಾಗೂ ಜಾಗೃತಿ ಕ್ರಮಗಳ ಕುರಿತು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ರಾಜ್ಯದಲ್ಲಿ ಕಳೆದ 2023 – 24 2024- 25,ಮತ್ತು 2025 ರ ಜೂನ್ ವರೆಗೆ ಒಟ್ಟು 1630 ಬಾಲ್ಯ ವಿವಾಹ ನಡೆದಿದೆ ಎಂಬುದನ್ನು ತಿಳಿಸಿರುತ್ತಾರೆ. ಇದರಲ್ಲಿ 2023-24 ರಲ್ಲಿ 719 ಪ್ರಕರಣ, 2024-25 ರಲ್ಲಿ 700 ಹಾಗೂ 2025-26 ರಲ್ಲಿ ಜೂನ್ ವರೆಗೆ 211 ಪ್ರಕರಣಗಳು ಇರುವುದಾಗಿದೆ

ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ 10 ಬಾಲ್ಯ ವಿವಾಹ :
ಉಡುಪಿ ಜಿಲ್ಲೆಯಲ್ಲಿ 2023-24 ರಲ್ಲಿ ಒಟ್ಟು 04 ಹಾಗೂ 2024-25 ರಲ್ಲಿ ಒಟ್ಟು 06 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಇದರಲ್ಲಿ 03 ಕುಟುಂಬ ಹೊರ ರಾಜ್ಯಕ್ಕೆ ಸಂಬಂದಿಸಿದ್ದು, 04 ಕುಟುಂಬಗಳು ಹೊರ ಜಿಲ್ಲೆಗೆ ಸoಬಂಧಿಸಿದ್ದು ಹಾಗೂ 03 ಪ್ರಕರಣಗಳು ಸ್ಥಳೀಯ ಕುಟುಂಬಕ್ಕೆ ಸೇರಿದ್ದು ಎಂಬುದಾಗಿ ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ

 

Related Articles

error: Content is protected !!