Home » 94 ಸಿ ಅಕ್ರಮ-ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿಗೆ ಮನವಿ
 

94 ಸಿ ಅಕ್ರಮ-ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಡಿಸಿಗೆ ಮನವಿ

by Kundapur Xpress
Spread the love

ಬೈಂದೂರು : ಕ್ಷೇತ್ರದ ಸಮಸ್ಯೆಗಳು ಹಾಗೂ ರೈತರಿಗೆ ಹಾಗೂ ಗ್ರಾಮೀಣ ಬಡ ಜನರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಬಾಕಿ ಉಳಿದಿರುವ ಹಕ್ಕು ಪತ್ರಗಳು ಹಾಗೂ ಮಂಜೂರಾತಿ ಪತ್ರಗಳನ್ನು ಒದಗಿಸಲು ಇರುವ ಅಡೆ ತಡೆ ನಿವಾರಿಸುವ ಸಲುವಾಗಿ ಶಾಸಕ ಗುರುರಾಜ್ ಗಂಟಿಹೊಳೆಯವರು ಡಿಸಿಯವರಿಗೆ ಮನವಿ ಮಾಡಿದರು.ಉಳ್ಳೂರು -74 ಗ್ರಾಮದ ಸರ್ವೇ ನಂಬ್ರ 153ರಲ್ಲಿ ಇದ್ದ 1,800 ಎಕ್ರೆ ಪೈಕಿ 150 ಎಕ್ರೆ ಅರಣ್ಯ ಭೂಮಿ ಹೊರತು ಪಡಿಸಿ ಬಾಕಿ ಉಳಿದಿರುವ ಕಂದಾಯ ಭೂಮಿಯಲ್ಲಿ ಹಲವಾರು ವರ್ಷ ಗಳಿಂದಮನೆ ಕಟ್ಟಿ ವಾಸವಿರುವವರಿಗೆ 94 ಸಿ ಅಡಿ ಹಕ್ಕು ಪತ್ರ ಹಾಗೂ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಅರ್ಹ ರೈತರಿಗೆ ಅಕ್ರಮ ಸಕ್ರಮದಡಿ ಭೂ ಮಂಜೂರಾತಿಗೆ ಅಗತ್ಯ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಲು ಹಾಗೂ ಇದೇ ರೀತಿ ಕ್ಷೇತ್ರದ ಇತರೆ ಕಡೆಯೂ ಇರುವ ಡೀಮ್ಸ್ ಫಾರೆಸ್ಟ್ ಜಂಟಿ ಸರ್ವೇ ಕಾರ್ಯ ತ್ವರಿತ ಗೊಳಿಸಲು ಹಾಗೂ ಕೊಲ್ಲೂರು ಗ್ರಾಮದ 121 ಹಾಗೂ 56 ಸರ್ವೇ ನಂಬ್ರ ಗಳಲ್ಲಿನ ಸಮಸ್ಯೆ ಹಾಗೂ ಜಡ್ಕಲ್ ಮುದೂರು ಪ್ಲಾಟಿಂಗ್ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಅಗತ್ಯ ಕ್ರಮ ವಹಿಸಲು ಮನವಿ ಮಾಡಿದರು.

 

Related Articles

error: Content is protected !!