Home » ಸಮಗ್ರ ಮತದಾರ ಪರಿಷ್ಕರಣಿಯ ಕಾರ್ಯಗಾರ
 

ಸಮಗ್ರ ಮತದಾರ ಪರಿಷ್ಕರಣಿಯ ಕಾರ್ಯಗಾರ

ಶಾಸಕ ಎ. ಕಿರಣ್ ಕೊಡ್ಗಿ ಭಾಗಿ

by Kundapur Xpress
Spread the love

ಕುಂದಾಪುರ: ಮುಂಬರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ಮಹತ್ವ ಮತ್ತು ಬೂತ್ ಲೆವೆಲ್ ಏಜೆಂಟ್ ಅವರ ವಲಯವಾರು ಪೂರ್ವ ತಯಾರಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ಮತದಾರ ಪಟ್ಟಿ ಪರಿಷ್ಕರಣಿ ಮಾಡುವಂತೆ ಸೂಚಿಸಿದರು.

ಬಿಎಲ್ಎ -2 ಇವರ ಜೊತೆ ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಸಮಗ್ರ ಮತದಾರ ಪರಿಷ್ಕರಣಿಯ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕುಂದಾಪುರ ಕ್ಷೇತ್ರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅವರು ಪ್ರಾಸ್ತಾವಿಕ ಮಾತುಗಳಾಡಿದರು.

ರಾಜ್ಯ ಬಿಜೆಪಿಯ ಸೂಚನೆಯಂತೆ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ನಡೆಸಿ ಮುಂದಿನ ದಿವಸ ಬಿಎಲ್ಎ- 2 ಹಾಗೂ ಘಟ ನಾಯಕರ ಜೊತೆ ಸಮಾವೇಶ ನಡೆಸುವ ರೂಪರೇಷೆಗಳ ಬಗ್ಗೆ ಬಿ.ಎಲ್.ಎ. ಸಂಚಾಲಕ ರಾಜೇಶ್ ಶೆಟ್ಟಿ ಶಿರೂರು ಮೂರ್ ಕೈ ವಿವರಿಸಿದ್ದರು.

ಸದ್ರಿ ಈ ಸಭೆ ವೇದಿಕೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ ಎಸ್ ಬಿ.ಎಲ್.ಎ. ಘಟ ನಾಯಕರಾದ ಸುರೇಂದ್ರ ಕಾಂಚನ್ ಸಂಗಮ್,,ಶ್ರೀಮತಿ ರೂಪಾ ಬಾಬು ಪೈ ಹಾಗೂ ಕಾರ್ಯಕ್ರಮದ ಅಪೇಕ್ಷಿತರಾದ ವಲಯವಾರು ಬಿ ಎಲ್.ಎ.2 ನ ಸದಸ್ಯರು ಉಪಸ್ಥಿತರಿದ್ದರು.

 

Related Articles

error: Content is protected !!