ಬೈಂದೂರು : ಕಲೆ, ಸಾಹಿತ್ಯ,ಸಂಸ್ಕೃತಿ ಸೇರಿದಂತೆ ಬೈಂದೂರಿನ ಸಾಧನೆ ಜಗತ್ತಿನಾದ್ಯಂತ ಪಸರಿಸಿದೆ.ಊರಿನ ಸಾಧನೆ ಸಂಭ್ರಮವಾಗಬೇಕಾದರೆ ಸಂಘಟಿತ ಶ್ರಮ ಅಗತ. ಇಲ್ಲಿನ ಶಾಸಕರಾದ ಗುರುರಾಜ ಗಂಟಿಹೊಳೆಯವರು ತಮ್ದ ಅವಿರತ ಶ್ರಮ ಹಾಗೂ ದಾನಿಗಳ ನೆರವಿನಿಂದ ಮಾದರಿಯ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ.ಬೈಂದೂರು ಉತ್ಸವದ ಮೂಲಕ ಸಾಂಸ್ಕೃತಿಕ ಕಲ್ಪನೆಯಲ್ಲಿ ಕಂಡಿರುವ ಅಭಿವೃದ್ಧಿ ಕನಸು ಸರ್ವರ ಸಹಕಾರದಲ್ಲಿ ಸಂಪನ್ನಗೊಳ್ಳಲಿದೆ ಎಂದು ಉದ್ಯಮಿ ರಾಮಕೃಷ್ಣ ಶೇರುಗಾರ್ ನುಡಿದರು
ಅವರು ಗುರುವಾರ ಸಮೃದ್ದ ಜನಸೇವಾ ಟ್ರಸ್ಟ್ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ -2024 ಅಂಗವಾಗಿ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆದ ಕ್ರೀಡಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದು. ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ.ಗೋಕುಲ ಶೆಟ್ಟಿ, ಜಯಾನಂದ ಹೋಬಳಿದಾರ್,ಗೌರಿ ದೇವಾಡಿಗ, ತಂಗಪ್ಪನ್,ಮಂಜುನಾಥ ಪೂಜಾರಿ ಆಗಮಿಸಿದ್ದರು
ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಸಸಿಹಿತ್ತು ವಂದಿಸಿದರು.

