ಬೆಂಗಳೂರು : ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಮೂಲದ ಕ್ಯಾಪ್ಟನ್ ಎಂ ವಿ ಪಾಂಜಲ್ ಸಹಿತ ಇಬ್ಬರು ಸೇನಾಧಿಕಾರಿಗಳು ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದು ಇಬ್ಬರು ಉಗ್ರರನ್ನು ಸಂಹಾರ ಮಾಡಲಾಗಿದೆ
ದಕ್ಷಿಣ ಕನ್ನಡ ಮೂಲದ ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಜಿಗಣಿಯ ನಂದನವನ ಬಡಾವಣೆಯ ನಿವಾಸಿಯಾದ ವೆಂಕಟೇಶ್ ಮತ್ತು ಅನೂರಾಧ ದಂಪತಿಯ ಎಕೈಕ ಪುತ್ರನಾದ ಎಂ ವಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ ಅವರಿಗೆ 29 ವರ್ಷ ವಯಸ್ಸಾಗಿದ್ದು ಎರಡು ವರ್ಷದ ಹಿಂದೆ ಅದಿತಿಯನ್ನು ವಿವಾಹವಾಗಿದ್ದರು
ಇವರ ವೀರ ಮರಣಕ್ಕೆ ಇಡೀ ಕರ್ನಾಟಕವೇ ಕಂಬನಿ ಮಿಡಿದಿದ್ದು ಶನಿವಾರ ಬೆಳಿಗ್ಗೆ ಮೃತದೇಹ ಬೆಂಗಳೂರಿಗೆ ಆಗಮಿಸಲಿದ್ದು ಆನೇಕಲ್ ಬಳಿಯ ಜಿಗಣಿ ಸಮೀಪದ ನಂದನವನ ಬಡಾವಣೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ