Home » ಪೊಲೀಸ್ ಕಸ್ಟಡಿಗೆ ಚೈತ್ರಾ ಕುಂದಾಪುರ
 

ಪೊಲೀಸ್ ಕಸ್ಟಡಿಗೆ ಚೈತ್ರಾ ಕುಂದಾಪುರ

chaithra kundapura - 420 case

by Kundapur Xpress
Spread the love

ಕುಂದಾಪುರ : ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು ಐದು ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತೆ ಚೈತ್ರ ಕುಂದಾಪುರ ಹಾಗೂ ಆಕೆಯ ಐವರು ಸಂಗಡಿಗರನ್ನು ಸೇರಿ ಒಟ್ಟು ಆರು ಮಂದಿಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ

ಬಂಧಿತ ಆರೋಪಿಗಳನ್ನು ಬುಧವಾರ ಬೆಂಗಳೂರಿನ ಒಂದನೇ ಎ ಸಿ ಎಂ ಎಂ ಕೋರ್ಟ್‌ ಗೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 10  ದಿನಗಳ ಕಾಲ ಅಂದರೆ ಸಪ್ಟೆಂಬರ್ 23ರ ವರೆಗೆ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ

ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ (28 ವರ್ಷ) ಚಿಕ್ಕಮಗಳೂರಿನ ಗಗನ್ ಕಡೂರು (30 ವರ್ಷ) ರಮೇಶ್ (35 ವರ್ಷ) ಧನರಾಜ್ (35 ವರ್ಷ) ಪ್ರಜ್ವಲ್ (35 ವರ್ಷ) ಶ್ರೀಕಾಂತ್ (40ವರ್ಷ) ಒಟ್ಟು ಆರು ಜನ ಆರೋಪಿಗಳನ್ನು ಬಂದಿಸಲಾಗಿದೆ

ಹೊಸಪೇಟೆ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಮತ್ತು ಪ್ರಸಾದ್ ಬೈಂದೂರು ಹಾಗೂ ಚೆನ್ನ ನಾಯ್ಕ  ಎಂಬುವರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

ಪ್ರಕರಣದ ಪ್ರಮುಖ ಆರೋಪಿಗಳಾದ ಚೈತ್ರ ಕುಂದಾಪುರ ರಮೇಶ್ ದೇವರಾಜ್ ಶ್ರೀಕಾಂತ್ ಪ್ರಜ್ವಲ್ ಅವರನ್ನು ಮಂಗಳವಾರ ರಾತ್ರಿ ಉಡುಪಿ ಹಾಗು ಚಿಕ್ಕಮಗಳೂರಿನಲ್ಲಿ ಬಂಧಿಸಿ ಬುಧವಾರ ಬೆಂಗಳೂರಿನ ಸಿಸಿಬಿ ಕಚೇರಿಗೆ ಪೊಲೀಸರು ಕರೆ ತಂದಿದ್ದಾರೆ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ  ಒಂದನೇ ಎ ಸಿ ಎಮ್ ಎಮ್‌ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಯಿತು ಆರೋಪಿಗಳು 5 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ವಂಚಿಸಲು ವ್ಯವಸ್ತಿತವಾಗಿ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದ್ದು ಬಂದಿತರಿಂದ  ಹಣವನ್ನು ಇನ್ನಷ್ಟೇ ಜಪ್ತಿ ಮಾಡಿಕೊಳ್ಳಬೇಕಿದೆ

ಸಿಸಿಬಿ ವಿಚಾರಣೆಯನ್ನು ಚುರುಕುಗೊಳಿಸಿದ್ದು ಪ್ರಕರಣದಲ್ಲಿ ಆರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು ಗೋವಿಂದಬಾಬು ಪೂಜಾರಿ ಹೇಗೆ ಪರಿಚಯವಾಯಿತು? ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಆಮಿಷ ಒಡ್ಡಿ ಹೇಗೆ ವಂಚಿಸಲಾಯಿತು ಎಂಬುದರ ಬಗ್ಗೆ ಚೈತ್ರಾಗೆ ತನಿಖಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ

ದೊಡ್ಡ ಮಟ್ಟದಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ಉಳಿದ ಸಹ ಆರೋಪಿಗಳ ಗಮನಕ್ಕೆ ಬಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

   

Related Articles

error: Content is protected !!