ಕುಂದಾಪುರ : ಚೈತ್ರ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಾಶ್ರೀ ಸ್ವಾಮೀಜಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಒಡಿಸ್ಸಾದ ಪೊಲೀಸರ ಸಹಾಯದಿಂದ ಕಟಕ್ ನಲ್ಲಿ ಬಂಧಿಸಿದ್ದಾರೆ ಚೈತ್ರಾ ಕುಂದಾಪುರ ಗ್ಯಾಂಗ್ ಸಿ ಸಿ ಬಿ ಬಲೆಗೆ ಸಿಲುಕಿಕೊಂಡ ಬೆನ್ನಲ್ಲೇ ಹಾಲಾಶ್ರೀ ಸ್ವಾಮಿ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದರು
ಬೆಂಗಳೂರು ಸಿ ಸಿ ಬಿ ಪೊಲೀಸರ ಮಾಹಿತಿ ಮೇರೆಗೆ ಕಟಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಹಾಲಾಶ್ರೀ ಸ್ವಾಮಿಯನ್ನು ವಶಕ್ಕೆ ಪಡೆದಿದ್ದರು ತಕ್ಷಣ ಮಾಹಿತಿ ಪಡೆದ ಸಿ ಸಿ ಬಿ ಪೊಲೀಸರು ಕಟಕ್ ಗೆ ತೆರಳಿ ಸ್ಥಳೀಯ ಕೋರ್ಟ್ ನಿಂದ ಟ್ರಾನ್ಸಿಟ್ ವಾರೆಂಟ್ ಪಡೆದು ಮಂಗಳವಾರ ಸಂಜೆ ವಿಮಾನದ ಮೂಲಕ ಬೆಂಗಳೂರಿಗೆ ಕರೆ ತಂದಿದ್ದಾರೆ
ಬಂಧನದಿಂದ ತಪ್ಪಿಸಿಕೊಳ್ಳಲು ಸ್ವಾಮಿ ಕಾವಿ ಕಳಚಿ ಟೀ ಶರ್ಟ್ ಧರಿಸಿ ವೇಷ ಬದಲಿಸಿದ್ದು ಪೊಲೀಸರ ದಿಕ್ಕು ತಪ್ಪಿಸಲು ನಾಲ್ಕು ಮೊಬೈಲ್ ಸಿಮ್ ಉಪಯೋಗಿಸುತ್ತಿದ್ದರು ಆಪ್ತರ ಬಳಿ ಮಾತ್ರವೇ ಸಂಪರ್ಕದಲ್ಲಿದ್ದ ಸ್ವಾಮೀಜಿ ಮೈಸೂರು ಹೈದರಾಬಾದ್ ಒಡಿಸ್ಸಾ ಪುಣ್ಯಕ್ಷೇತ್ರಗಳ ರಕ್ಷಣೆ ಪಡೆದು ವಾರಣಾಸಿ ತಲುಪುವ ಸಿದ್ಧತೆಯಲ್ಲಿದ್ದರು
ಈ ಹಿಂದೆ ಚೈತ್ರ ಕುಂದಾಪುರ ಸಿಸಿಬಿ ಕಚೇರಿಯ ಮುಂದೆ ಸ್ವಾಮೀಜಿ ಸಿಕ್ಕಿ ಹಾಕಿಕೊಳ್ಳಲಿ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ ಎಂದು ಹೇಳಿದ್ದು ಈಗ ಸ್ವಾಮೀಜಿ ಬಂಧನವಾಗಿದ್ದು ಪ್ರಭಾವಿ ವ್ಯಕ್ತಿಗಳ ಬಗ್ಗೆ ಮಾಹಿತಿ ಬರುತ್ತದೆ ಎಂಬ ಕುತೂಹಲ ಮೂಡಿದೆ