ಕುಂದಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ ಹಣ ಪಡೆದ ಆರೋಪಿ ಚೈತ್ರಾಕುಂದಾಪುರ ಬ್ಯಾಂಕ್ ಖಾತೆಯಲ್ಲಿ ಹೆಚ್ಚುವರಿಯಾಗಿ ಎರಡು ಕೋಟಿ ರೂ ಮೌಲ್ಯದ ನಗ ನಗದು ಇರುವುದು ಪತ್ತೆಯಾಗಿದೆ ಶನಿವಾರ ಚೈತ್ರಾ ಕುಂದಾಪುರ ಮನೆ ಬ್ಯಾಂಕ್ ಖಾತೆಗಳು ಹಾಗೂ ಆಕೆಯ ಸಂಬಂಧಿಕರ ಬ್ಯಾಂಕ್ ಖಾತೆಗಳಿಂದ ಒಟ್ಟು 1.08 ಕೋಟಿ ಮೌಲ್ಯದ ಆಸ್ತಿ ಪತ್ರ 65 ಲಕ್ಷ ರೂ ಚಿನ್ನಾಭರಣ 40 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿತ್ತು ಆದರೆ ಇದೀಗ ಅದಲ್ಲದೆ ಹೆಚ್ಚುವರಿಯಾಗಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ನಗದು ಹಾಗೂ ಲಕ್ಷಾಂತರ ರೂಪಾಯಿ ಠೇವಣಿ ಇರಿಸಿದ್ದಾಳೆಂಬುದು ಬೆಳಕಿಗೆ ಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ
ಕಾರು ದುರ್ಬಳಕೆ : ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನ ಪಾತ್ರ ಮಾಡಿದ್ದ ಚೆನ್ನ ನಾಯಕ್ ಬಳಸಿದ ಕಾರು ಸಾಲುಮರದ ತಿಮ್ಮಕ್ಕನಿಗೆ ಸೇರಿದೆ ಎಂದು ಹೇಳಲಾಗಿದೆ ಕುಮಾರ ಕೃಪಾ ಗೆಸ್ಟ್ ಹೌಸ್ ಪ್ರವೇಶಿಸಲು ಅವರ ಗೂಟದ ಕಾರು ಬಳಸಲಾಗಿದೆ ದೂರುದಾರ ಗೋವಿಂದಬಾಬು ಪೂಜಾರಿ ಅವರನ್ನು ನಂಬಿಸಲು ಸರಕಾರಿ ಕಾರನ್ನು ದುರ್ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ
ಈ ಮಧ್ಯೆ ಪ್ರಕರಣದ 7ನೇ ಆರೋಪಿ ಶ್ರೀಕಾಂತ್ ಅವರ ಮನೆಯಿಂದ 40 ಒಂದು ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ ಹಾಗೆ ಚೈತ್ರ ಉಪಯೋಗಿಸಿದ ಕಿಯಾ ಕಾರನ್ನು ಮುಧೋಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಬಾಗಲಕೋಟೆ ಕಿರಣ್ ಎಂಬುವರು ಈ ಕಾರನ್ನು ಬಳಸುತ್ತಿದ್ದರು ಶ್ರೀಕಾಂತ್ ಮತ್ತು ಚೈತ್ರ ರವರ ಜಂಟಿ ಖಾತೆಯನ್ನು ಸೀಜ್ ಮಾಡಲಾಗಿದ್ದು ಚೈತ್ರ ಇನ್ನೂ ಒಂದು ದಿನ ಆಸ್ಪತ್ರೆಯಲ್ಲಿ ಕಳೆಯಲಿದ್ದಾಳೆ ಎಂದು ತಿಳಿದುಬಂದಿದೆ ಹಾಲಶ್ರೀ ಅಭಿನಯ ಸ್ವಾಮಿಯ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು ಕಾರು ಚಾಲಕರನ್ನು ಬಂಧಿಸಲಾಗಿದೆ