ಕುಂದಾಪುರ : ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿ ಕುಂದಾಪುರ ಇಲ್ಲಿನ ಶ್ರೀ ಚಕ್ರಮ್ಮ ಸಭಾಭವನ ಫೆ.05 ರಂದು ಬುಧವಾರ ಬೆಳಿಗ್ಗೆ ಗಂಟೆ 10:30 ಕ್ಕೆ ಲೋಕಾರ್ಪಣೆಗೊಳ್ಳಲಿದ್ದು, ಈ ಪ್ರಯುಕ್ತ ಸಭಾಭವನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಚಕ್ರಮ್ಮ ದೇವಿಯ ಸನ್ನಿಧಾನದಲ್ಲಿ ಜರುಗಿತು ಆಮಂತ್ರಣ ಪತ್ರಿಕೆಯನ್ನು ಶ್ರೀ ಚಕ್ರಮ್ಮ ದೇವಸ್ಥಾನದ ಅಧ್ಯಕ್ಷರು ಹಾಗೂ ಸಭಾಭವನ ಸಮಿತಿಯ ಗೌರವಾಧ್ಯಕ್ಷರಾದ ಕೋಡಿ ಗೋಪಾಲ ಪೂಜಾರಿ ಹಾಗೂ ಸಭಾಭವನ ಸಮಿತಿಯ ಅಧ್ಯಕ್ಷರಾದ ಶಂಕರ ಪಿ. ಪೂಜಾರಿ, ಸಮಿತಿಯ ಕಾರ್ಯದರ್ಶಿ ಕೋಶಾಧಿಕಾರಿ ಮತ್ತು ಸರ್ವ ಸದಸ್ಯರು, ಮತ್ತು ದೇವಸ್ಥಾನದ ಟ್ರಸ್ಟ್ ನ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಭಾಭವನ ಸಮಿತಿಯ ಅಧ್ಯಕ್ಷರಾದ ಶಂಕರ ಪಿ. ಪೂಜಾರಿ, ದೇವಸ್ಥಾನದ ಪಾತ್ರಿಗಳಾದ ರಾಘವೇಂದ್ರ ಸಿ. ಪೂಜಾರಿ, ದೇವಸ್ಥಾನದ ಟ್ರಸ್ಟಿಗಳಾದ ತಿಮ್ಮಪ್ಪ ಖಾರ್ವಿ, ನಾಗೇಶ್ ಎಚ್. ಪುತ್ರನ್, ಲಕ್ಷ್ಮೀ ಬಾಯಿ, ಸಂಜೀವ ಆರ್. ಪೂಜಾರಿ, ಪ್ರಭಾಕರ, ಗಂಗಾಧರ ಜಿ.ಪೂಜಾರಿ, ಪ್ರಕಾಶ್ ಅಂಚನ್ ಹಾಗೂ ಸಭಾಭವನ ಸಮಿತಿ ಸದಸ್ಯರಾದ ನಾರಾಯಣ ಪೂಜಾರಿ, ವಿಠ್ಠಲ ಎ ಪೂಜಾರಿ, ನಾಗರಾಜ ಕಾಂಚನ್ ಮತ್ತು ಗ್ರಾಮಸ್ಥರಾದ ಪಾಂಡುರಂಗ ಖಾರ್ವಿ, ಶಂಕರ ಕೆ. ಪೂಜಾರಿ, ಜಯಪ್ರಕಾಶ್ ಉಪಸ್ಥಿತರಿದ್ದರು. ಸಭಾಭವನದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.