ಕುಂದಾಪುರ : ಕುಂಭಾಶಿ ರಾಜಗೋಪಾಲ ಆಚಾರ್ಯರವರು ನಿರ್ಮಿಸಿದ ಬ್ರಹ್ಮರಥವು ಕೋಟೇಶ್ವರ ಕೋಟಿಲಿಂಗೇಶ್ವರನ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿ ಸುಳ್ಯ ಚೆನ್ನಕೇಶವ ದೇವರಿಗೆ ಸಮರ್ಪಿಸುವ ಬ್ರಹ್ಮರಥವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು.
ಸುಳ್ಯ ಚೆನ್ನಕೇಶವ ದೇವರಿಗೆ ಕೊಡಮಾಡಿದ ದಾನಿಗಳಾದ ಡಾ! ಕುರಂಜಿ ಚಿದಾನಂದ ಗೌಡ ಹಾಗೂ ಮನೆಯವರು ಹಾಗೂ ದೇವಸ್ಥಾನದ ಧಾರ್ಮಿಕ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.