Home ಕರಾವಳಿ ಸುದ್ದಿಇಂದು ಮತ್ತು ನಾಳೆ ಪ್ರತಿಷ್ಠಾಪನಾ ಮಹೋತ್ಸವ

ಇಂದು ಮತ್ತು ನಾಳೆ ಪ್ರತಿಷ್ಠಾಪನಾ ಮಹೋತ್ಸವ

ಇಂದು ಮತ್ತು ನಾಳೆ ಪ್ರತಿಷ್ಠಾಪನಾ ಮಹೋತ್ಸವ

by Kundapur Xpress

ಕುಂದಾಪುರ : ಕುಂದಾಪುರ ನಗರದ ಕೋಡಿಯ ಕೋಟೆ ಶ್ರೀ ಜಟ್ಟಿಗರಾಯ ದೇವಸ್ಥಾನದ ವಠಾರದಲ್ಲಿ ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮವಾದ ಚಿತ್ರಕೂಟ ನಾಗಬನದ ಪ್ರತಿಷ್ಠಾಪನ ಮಹೋತ್ಸವವು ಇಂದು ಮತು ನಾಳೆ ನೆರವೇರಲಿದೆ

ಜುಲೈ 08 ರಂದು ಇಂದು ಸೋಮವಾರ ರಾತ್ರಿ ಗಂಟೆ 7.00 ರಿಂದ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಅಧಿವಾಸ ಪೂಜಾ ಬಲಿ, ಆಶ್ಲೇಷಾ ಬಲಿ ಮತ್ತು ವಿವಿಧ ಧಾರ್ಮಿಕ ದೇವತಾ ಕಾರ್ಯಕ್ರಮಗಳು ನಡೆಯಲಿದೆ.

ನಾಳೆ ಜುಲೈ 09 ರಂದು ಮಂಗಳವಾರ ಬೆಳಿಗ್ಗೆ 7.00 ರಿಂದ ಗಣಪತಿ ಆರಾಧನೆ, ಪುಣ್ಯಾಹ ವಾಚನ, ದೇವನಾಂದಿ, ಪ್ರತಿಷ್ಠಾ ಹೋಮ, ಬಿಂಬ ಪ್ರತಿಷ್ಠೆ, ಸರ್ಪ ಮೂಲಮಂತ್ರ ಹೋಮ, ಪ್ರತಿಷ್ಠಾ ಕಲಾಪೂರ್ವಕ ಕಲಶ ಸ್ಥಾಪನೆ, ಕಲಾಭಿಷೇಕ, ಮಹಾಪೂಜೆ, ನಾಗದರ್ಶನ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ

ಸಂಜೆ ಗಂಟೆ 4.00ಕ್ಕೆ ರಾಮಕ್ಷತ್ರಿಯ ಮಹಿಳಾ ಮಂಡಳಿ ಕೋಡಿ ಇವರಿಂದ ಭಜನೆ ಮುಂತಾದ, ಈ ಧಾರ್ಮಿಕ ಕಾರ್ಯಕ್ರಮಗಳು ಸನ್ನಿಧಾನದಲ್ಲಿ ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜೀರ್ಣೋದ್ದಾರ ಸಮಿತಿ ಹಾಗೂ ಹವಲ್ದಾರ್‌ ಕುಟುಂಬಸ್ಥರು ಮತ್ತು ನಂಬಿದ ಭಕ್ತಾದಿಗಳು ವಿನಂತಿಸಿದ್ದಾರೆ

ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ನಾಗಬನದ ಎಲ್ಲಾ ಮೂರ್ತಿಗಳು ಭಕ್ತಾಧಿಗಳಿಗೆ ಅಭಿಮುಖವಾಗಿ ಪ್ರತಿಷ್ಠಾಪನೆಗೊಂಡರೆ ಕೋಡಿಯ ಕೋಟೆ ಶ್ರೀ ಜಟ್ಟಿಗರಾಯ ದೇವಸ್ಥಾನದ ಬಳಿಯಲ್ಲಿರುವ ನಾಗಬನದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಗನ ಮೂರ್ತಿಯು ಪ್ರತಿಷ್ಠಾಪನೆಗೊಳ್ಳಲಿದ್ದು ಪ್ರದಕ್ಷಿಣೆ ಹಾಕುವಾಗ 4 ದಿಕ್ಕುಗಳಲ್ಲಿ ನಾಗನ ಮೂರ್ತಿಯನ್ನು ನೋಡಲು ಸಾಧ್ಯವಾಗುವುದರಿಂದ ಈ ಬನಕ್ಕೆ ಚಿತ್ರಕೂಟ ನಾಗ ಬನ ಎಂದು ಕರೆಯಲಾಗುತ್ತದೆ

Related Articles