ಕುಂದಾಪುರ : ಕುಂದಾಪುರ ನಗರದ ಕೋಡಿಯ ಕೋಟೆ ಶ್ರೀ ಜಟ್ಟಿಗರಾಯ ದೇವಸ್ಥಾನದ ವಠಾರದಲ್ಲಿ ಉಡುಪಿಜಿಲ್ಲೆಯಲ್ಲೇ ಪ್ರಪ್ರಥಮವಾದ ಚಿತ್ರಕೂಟ ನಾಗಬನದ ಪ್ರತಿಷ್ಠಾಪನೆ ನೆರವೇರಲಿದೆ
ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ನಾಗಬನದ ಎಲ್ಲಾ ಮೂರ್ತಿಗಳು ಭಕ್ತಾಧಿಗಳಿಗೆ ಅಭಿಮುಖವಾಗಿ ಪ್ರತಿಷ್ಠಾಪನೆಗೊಂಡರೆ ಕೋಡಿಯ ಕೋಟೆ ಶ್ರೀ ಜಟ್ಟಿಗರಾಯ ದೇವಸ್ಥಾನದ ಸನ್ನಿಧಿಯ ನಾಗಬನದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಗನ ಮೂರ್ತಿಯು ಪ್ರತಿಷ್ಠಾಪನೆಗೊಳ್ಳಲಿದ್ದು ಪ್ರದಕ್ಷಿಣೆ ಹಾಕುವಾಗ 4 ದಿಕ್ಕುಗಳಲ್ಲಿ ನಾಗನ ಮೂರ್ತಿಯನ್ನು ನೋಡಲು ಸಾಧ್ಯವಾಗುತ್ತದೆ
ಊರ ಮತ್ತು ಪರಊರ ಭಕ್ತಾದಿಗಳ ಕೇಂದ್ರವಾಗಿರುವ ಈ ನಾಗಬನವು ಕುಂದಾಪುರದ ಹವಲ್ದಾರ್ ಕುಟುಂಬದ ಮೂಲ ಬನವಾಗಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಚಿತ್ರಕೂಟ ಬನವಾಗಿ ರೂಪುಗೊಳ್ಳಲಿದೆ
ಕೋಟೆ ಶ್ರೀ ಜಟ್ಟಿಗರಾಯ ದೇವಸ್ಥಾನದ ಬಳಿಯಿರುವ ನಾಗ ಸನ್ನಿಧಿಯ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮಪು ಇದೇ ತಿಂಗಳ ಜುಲೈ.08 ರಂದು ಸೋಮವಾರ ಹಾಗೂ ಜುಲೈ 09 ಮಂಗಳವಾರ ಜಟ್ಟಿಗರಾಯ ದೇವಸ್ಥಾನದ ವಠಾರದಲ್ಲಿ ಜರುಗಲಿದೆ
ಜುಲೈ 08 ರಂದು ಸೋಮವಾರ ರಾತ್ರಿ ಗಂಟೆ 7.00 ರಿಂದ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಅಧಿವಾಸ ಪೂಜಾ ಬಲಿ, ಆಶ್ಲೇಷಾ ಬಲಿ ಮತ್ತು ವಿವಿಧ ಧಾರ್ಮಿಕ ದೇವತಾ ಕಾರ್ಯಕ್ರಮಗಳು ನಡೆಯಲಿದೆ.
ಜುಲೈ 09 ರಂದು ಮಂಗಳವಾರ ಬೆಳಿಗ್ಗೆ 7.00 ರಿಂದ ಗಣಪತಿ ಆರಾಧನೆ, ಪುಣ್ಯಾಹ ವಾಚನ, ದೇವನಾಂದಿ, ಪ್ರತಿಷ್ಠಾ ಹೋಮ, ಬಿಂಬ ಪ್ರತಿಷ್ಠೆ, ಸರ್ಪ ಮೂಲಮಂತ್ರ ಹೋಮ, ಪ್ರತಿಷ್ಠಾ ಕಲಾಪೂರ್ವಕ ಕಲಶ ಸ್ಥಾಪನೆ, ಕಲಾಭಿಷೇಕ, ಮಹಾಪೂಜೆ, ನಾಗದರ್ಶನ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ
ಸಂಜೆ ಗಂಟೆ 4.00ಕ್ಕೆ ರಾಮಕ್ಷತ್ರಿಯ ಮಹಿಳಾ ಮಂಡಳಿ ಕೋಡಿ ಇವರಿಂದ ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸನ್ನಿಧಾನದಲ್ಲಿ ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜೀರ್ಣೋದ್ದಾರ ಸಮಿತಿ ಹಾಗೂ ಹವಲ್ದಾರ್ ಕುಟುಂಬಸ್ಥರು ಮತ್ತು ನಂಬಿದ ಭಕ್ತಾದಿಗಳು ವಿನಂತಿಸಿದ್ದಾರೆ