ಬೈಂದೂರು : ಸಮೃದ್ಧ ಬೈಂದೂರು, ಹಾಗೂ ಶಾಸಕರ ನೇತೃತ್ವದಲ್ಲಿ ನಡೆಯುವ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಾರಕ್ಕೊಮ್ಮೆ ಕಡಲ ತಡಿಯ ಬೀಚಿನಲ್ಲಿ ನಡೆಯುವ ಸ್ವಚ್ಛತಾ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ
ಪ್ರತಿ ಭಾನುವಾರ ಗಂಗೊಳ್ಳಿ ಲೈಟ್ ಹೌಸ್, ಗುಜ್ಜಾಡಿ ,ಬೆನ್ನಿಗೇರಿ, ಕಂಚುಗೋಡು, ತ್ರಾಸಿ, ಮರವಂತೆ, ನಾವುಂದ, ಕಿರಿಮಿಂಜೇಶ್ವರ, ನಾಗೂರು,ಉಪ್ಪುಂದ ,ಬೈಂದೂರು, ಸೋಮೇಶ್ವರ ಬೀಚ್, ಸೇರಿದಂತೆ ಬೈಂದೂರು ಭಾಗದ ಎಲ್ಲಾ ಕಡಲ ತಡಿಯಲ್ಲಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು
ಅದರಂತೆ ಇಂದು ಭಾನುವಾರ 80 ನೇ ವಾರದ ಕಾರ್ಯಕ್ರಮ ರಾಷ್ಟ್ರೀಯ ಹೆದ್ದಾರಿ 66ರ ವಿಶ್ವ ಪ್ರಸಿದ್ಧ ತ್ರಾಸಿ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು,
ಸ್ವಚ್ಛತಾ ಕಾರ್ಯಕ್ರಮದ ಸಂದರ್ಭ ಸಮಾಜಸೇವಕ, ಆಪದ್ಬಾಂಧವ, , ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಯ ವೆಚ್ಚ ಭರಿಸಲು ವೇಷವನ್ನು ಧರಿಸಿ ಬಂದಂತಹ ಹಣ ಬಡ ಕುಟುಂಬದವರಿಗೆ ನೀಡಿ ಸಾಂತ್ವಾನ ನೀಡುತ್ತಿರುವ ಬೆಂಕಿ ಮಣಿ (ಯಾನೆ) ಸಂತು ಅವರನ್ನು ತ್ರಾಸಿ ಬೀಚ್ ಉತ್ಸವ ಸಮಿತಿ ತಂಡ ಹಾಗೂ ಸಂಘ ಸಂಸ್ಥೆಗಳು ಗೌರವದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕೈಜೋಡಿಸಿದವರು ಲಯನ್ಸ್ ಕ್ಲಬ್ ತ್ರಾಸಿ, ಗಂಗೊಳ್ಳಿ, ಕರಾವಳಿ ಪೊಲೀಸ್ ಠಾಣೆ ಗಂಗೊಳ್ಳಿ, ತ್ರಾಸಿ ಬೀಚ್ ಉತ್ಸವ ತಂಡದ ಸದಸ್ಯರು, ಪ್ರವಾಸಿಗರು, ಸಾರ್ವಜನಿಕರು ಹಾಜರಿದ್ದರು.