ಕೋಟ : ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ ಸಾರಥ್ಯದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ,ಉಡುಪಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇವರ ಸಹಕಾರದಲ್ಲಿ ಕರಾವಳಿ ಮೊಗವೀರ ಸಭಾಭವನ, ಸಾಲಿಗ್ರಾಮದಲ್ಲಿ ಸೆ. 22ರ ಭಾನುವಾರ ಮಧ್ಯಾಹ್ನ 2.00 ರಿಂದ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮ ಜರಗಲಿದೆ. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ ಸೆ.19 ಗುರುವಾರವಾಗಿದ್ದು 0-2 ವರ್ಷ, ಮುದ್ದುಕೃಷ್ಣ 2-4 ವರ್ಷ, ಕಂದಕೃಷ್ಣ 4-7 ವರ್ಷ, ಬಾಲಕೃಷ್ಣ ವೇಷಭೂಷಣ, ಪರಿಕರದ ಜವಾಬ್ದಾರಿ ಸ್ಪರ್ಧಾಳುಗಳೇ ಮಾಡಿಕೊಳ್ಳಬೇಕು.
ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದಲ್ಲದೆ ಭಾಗವಹಿಸಿದ ಪ್ರತಿ ಸ್ಪರ್ಧಾಳುವಿಗೂ ಪ್ರಮಾಣ ಪತ್ರ ನೀಡಲಾಗುವುದು.ಸರ್ವರಿಗೂ ಮುಕ್ತ ಮತ್ತು ಉಚಿತ ಪ್ರವೇಶವಾಗಿದ್ದು ಭಾಗವಹಿಸುವ ಮಗುವಿನ ಹೆಸರು, ಫೋಟೋ, ಜನನ ಪ್ರಮಾಣಪತ್ರ ಅಥವಾ ಆಧಾರ್ ಕಾರ್ಡ್ ಪ್ರತಿಯನ್ನು ಈ ನಂಬರಿಗೆ ಕಳುಹಿಸಿ ಸಾಂಸ್ಕೃತಿಕ ಕಾರ್ಯದರ್ಶಿ ಆನಂದ ಉಪ್ಲಾಡಿ 9964634440 ಎಂದುಸಂಘಟಕರು ತಿಳಿಸಿದ್ದಾರೆ.