ಕೋಟ : ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಇಲ್ಲಿ 30 ಗಂಟೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಸಮಾರೋಪ ಸಮಾರಂಭ ಸೆ.09 ರಿಂದ 20ರ ವರೆಗೆ ಕಾಲೇಜಿನಲ್ಲಿ ಜರಗಿತು.ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲ್ಯತೆಯ ಬಗ್ಗೆ ಕುಂದಾಪುರದ ಸ್ಪರ್ಧಾ ಸಾರಥಿ ತರಬೇತಿ ಸಂಸ್ಥೆಯಿಂದ ಸುಮಾರು 30 ಗಂಟೆಗಳ ತರಬೇತಿಯನ್ನು ನೀಡಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕುಂದಾಪುರದ ಸ್ಪರ್ಧಾ ಸಾರಥಿಯ ನಿರ್ದೇಶಕ ಆದರ್ಶ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿ ಕುಂದಾಪುರ ಪರಿಸರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ಸೇವೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಮ್ಮ ಸಂಸ್ಥೆ ಮಾಡುತ್ತಿದ್ದು ಅದರ ಪ್ರಯೋಜನೆ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೋ.ಸುನೀತಾ ವಿ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗಳಿಗೆ ಸ್ಪರ್ಧಿಸುವಂತೆ ಸ್ಪೂರ್ತಿ ತುಂಬುವ ಪ್ರಯತ್ನ ನಡೆಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಸುಬ್ರಹ್ಮಣ್ಯ ,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ.ರಮೇಶ ಆಚಾರ್ಯ ಉಪಸ್ಥಿತರಿದರು.