ಕೋಟ : ಇಲ್ಲಿನ ತೆಕ್ಕಟ್ಟೆ ತ್ರಿಷಿಕಾ ಶೆಟ್ಟಿ ಹೃದಯ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದು ಆಕೆಯ ವೈದ್ಯಕೀಯ ಚಿಕಿತ್ಸೆಗೆ ಕೋಟದ ಸಾಮಾಜಿಕ ಕಾರ್ಯಕರ್ತ ಜಯರಾಜ್ ಸಾಲಿಯಾನ್ ಪಡುಕರೆ ತಮ್ಮ ವಾಟ್ಸಪ್ ಗ್ರೂಪ್ ಮೂಲಕ ಸಂಗ್ರಹವಾದ ಸುಮಾರು 15.೦೦೦ ಹಣವನ್ನ ಮಗುವಿನ ಮನೆಯವರಿಗೆ ಕೋಟದ ಹಾಡಿಕೆರೆ ಬೆಟ್ಟಿನ ಶಾಂತಮೂರ್ತಿ ಶ್ರೀ ಶನೀಶ್ವರ ಸನ್ನಿಧಿಯಲ್ಲಿ ಇತ್ತೀಚಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೈಶಿವಾಜಿ ಸೇವಾ ಟ್ರಸ್ಟಿನ ರತ್ನಾಕರ ಹಟ್ಟಿಕುದ್ರು, ಬದುಕು ತಂಡದ ದಿನೇಶ್ ಹಾರ್ದಿಕ್ ,ರಜತ್ ಹಾಗೂ ದಿನೇಶ ಕೋಟ ಜೊತೆಗೆ ಇದ್ದರು.