ಕುಂದಾಪುರ: ಯೌವನದಲ್ಲೇ ಮಾಜಿ ಸಂಸದ ಜಯರಾಮ ಶೆಟ್ಟಿಯವರ ಒಡನಾಡಿಯಾಗಿದ್ದ ಗಣೇಶ್ ಹೆಗ್ಡೆ ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಅವಕಾಶವಿತ್ತು. ಅಷ್ಟೇ ಅಲ್ಲ ಮಾಜಿ ಸಂಸದ ಅನಂತ ಕುಮಾರ ಹೆಗಡೆ ಆತ್ಮೀಯ ಗೆಳೆಯರಾಗಿದ್ದರು. ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದ ಕಾರಣ ಬದುಕಿಗಾಗಿ ಏನನ್ನು ಮಾಡಿಕೊಳ್ಳಲಿಲ್ಲ. ಸಮಾಜಸೇವೆ, ರಾಜಕೀಯ, ಪತ್ರಿಕೆ, ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು ಸಹ ಸರಳ ಜೀವನಕ್ಕೆ ಅಂಟಿಕೊಂಡಿದ್ದರು ಎಂದು ಕಲಾಕ್ಷೇತ್ರ ಟ್ರಸ್ಟ್‌ನ ಕಿಶೋರ್ ನುಡಿದರು. ಇಲ್ಲಿನ ಮೊಗವೀರ ಭವನದಲ್ಲಿ ಅಗಲಿದ ಪತ್ರಕರ್ತ ಗಣೇಶ್ ಹೆಗ್ಡೆ ಯವರಿಗೆ ಮೈಲಾರೇಶ್ವರ ಯುವಕ ಮಂಡಲ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಕಿರಣ್ ಕುಮಾರ ಕೊಡ್ಲಿ,ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಆರ್‌ಎಸ್‌ಎಸ್ ಪ್ರಮುಖ ಸುಬ್ರಹ್ಮಣ್ಯ ಹೊಳ್ಳ, ಹಿರಿಯ ಪತ್ರಕರ್ತ ಯು.ಎಸ್. ಶೆಣೈ ಮತ್ತಿತರರು ನುಡಿನಮನ ಸಲ್ಲಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ, ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷ ಶರತ್, ಪುರಸಭೆ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಊರ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

