ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಮುಖ್ಯ ಮೊದಲು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು, ನಾನು ಯಾವುದೇ ನಾಯಕರ ಹೆಸರಿನಲ್ಲಿ ಮತ ಕೇಳುವುದಿಲ್ಲ ನನ್ನ ಹೆಸರಿನಲ್ಲಿ ಮತ ಕೇಳುತ್ತೇನೆ ಎಂದು ಉಡುಪಿಯ ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಹೆಗ್ಡೆ ಹೇಳಿದರು ಅವರು ನಗರದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ನಾಯಕರ ಹೆಸರಲ್ಲಿ ಮತ ಪಡೆದವರು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕೆಲಸ ಮಾಡುವವರಿಗೆ ಮತ ನೀಡಿ ಎಂದರು. ಎಲ್ಲಾ ಬಂಟರ ಮತಗಳು ನನ್ನದಾಗುವುದಿಲ್ಲ ಎಲ್ಲಾ ಬಿಲ್ಲವರ ಮತಗಳು ಅವರದಾಗುವುದಿಲ್ಲ. ನಾವು ಜಾತ್ಯತೀತ ಸಮಾಜದಲ್ಲಿ ಇದ್ದೇವೆ, ಜನರ ಅಭಿಪ್ರಾಯ ಮುಖ್ಯ. ಸರಳತೆ ಮಾತ್ರ ಕೆಲಸ ಮಾಡುವುದಿಲ್ಲ ನನಗೆ ಅನುಭವವಿದೆ. ನಾನು ಯಾವುದೇ ಚುನಾವಣೆಯಲ್ಲಿ ಎದುರಾಳಿಯನ್ನು ಟೀಕಿಸಿಲ್ಲ.ಯಾವುದೇ ನಾಯಕರ ಹೆಸರಿನಲ್ಲಿ ಮತ ಕೇಳುವುದಿಲ್ಲ. ನನ್ನ ಹೆಸರಿನಲ್ಲಿ ಮತ ಕೇಳುತ್ತೇನೆ. ಮತದಾರರಿಗೆ ನನ್ನ ಪರಿಚಯ ಮಾಡಿಕೊಳ್ಳಬೇಕು ಎಂಬ ಸಮಸ್ಯೆ ಎದುರಾಗಲ್ಲ ಎಂದರು.